ಮೈಸೂರು : ಕ್ಷೇತ್ರದ ಪ್ರತಿ ಅಟೋಗಳಲ್ಲಿ ಶ್ರೀರಾಮನ ಕೇಸರಿ ಧ್ವಜ ಇರಬೇಕು ಎಂದು ಟಿ.ಎಸ್.ಶ್ರೀ ವತ್ಸ ಶಾಸಕರು ಕೆ.ಅರ್.ಕ್ಷೇತ್ರ ಎಲ್ಲಾ ಆಟೋದವರಿಗೆ ಹಾಗೂ ದೇವಾಲಯಗಳಿಗೆ ಉಚಿತವಾಗಿ ರಾಮನ ಕೇಸರಿ ಧ್ವಜವನ್ನು ವಿತರಿಸಿದರು.
ಕ್ಷೇತ್ರದ ಸುಮಾರು 60 ಆಟೋ ನಿಲ್ದಾಣ ಗಳಿಗೆ ಖುದ್ದು ಹೋಗಿ 2000 ಧ್ವಜಗಳನ್ನು ಅಟೋ ಡ್ರೈವರ್ ಗಳೊಂದಿಗೆ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆಯುತ್ತಿರುವ ಅಂಗವಾಗಿ ಹಿಂದು ಸಂಸ್ಕೃತಿ ಯ ಪ್ರತೀಕ ಕೇಸರಿ ಧ್ವಜಗಳನ್ನು ಕ್ಷೇತ್ರದ ಎಲ್ಲ ಮಾಜಿ ನಗರಪಾಲಿಕೆ ಸದಸ್ಯರು ಹಾಗೂ ಹಿರಿಯ ಮುಖಂಡರು ಗಳೊಂದಿಗೆ ವಿತರಿಸಿದರು
ಭಾರತೀಯ ಜನತಾ ಪಾರ್ಟಿಯು 1992 ರಿಂದಲೂ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖ ಮಾಡಲಾಗಿತ್ತು ಅದರಂತೆಯೇ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರ್ಕಾರ 22 ರಂದು ಭಾರತದ ಎಲ್ಲ ಗಣ್ಯರು ಗಳ ಸಮ್ಮುಖದಲ್ಲಿ ನೆರವೇರುತ್ತಿದ್ದು ಅಂತಹ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿ ಹಬ್ಬದ ವಾತವರಣ ನಿರ್ಮಾಣ ವಾಗಬೇಕೆಂದು ಹೇಳಿದರು
ಈ ಸಂಧರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಮಾಜಿ ನಗರಪಾಲಿಕೆ ಸದಸ್ಯರು, ಕ್ಷೇತ್ರದ ಪದಾಧಿಕಾರಿಗಳು, ವಾರ್ಡ್ ಅಧ್ಯಕ್ಷರು,ಹಾಗೂ ಹಿರಿಯ ಮುಖಂಡರು ಗಳು ಉಪಸ್ಥಿತಿರಿದ್ದರು.