ಮೈಸೂರು : ನನ್ನ ತಮ್ಮನ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಸತ್ಯ ಹೇಳಿದ್ದರು.
ಈ ಕಾರಣ ಅವರಿಗೆಧನ್ಯವಾದ ಕೃತಜ್ಞತೆ ಸಲ್ಲಿಕೆ ಮಾಡಲು ಅವರ ಮನೆಗೆ ತೆರಳಿದ್ದೆ.ನಾನು ಎರಡು ಬಾರಿ
ಬಿಜೆಪಿ ಅಭ್ಯರ್ಥಿ ಆದರೂ ನಾನು ಹಾಲ್ ಪಾರ್ಟಿ ಕ್ಯಾಂಡಿಡೇಟ್ ಮುಂದಿನ ಚುನಾವಣೆಯಲ್ಲಿ ಬೆಂಬಲ ಕೊಡುವಂತೆಯೂ ಕೇಳಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಪ್ರೀತಿ ಇರುವವರು ಎಲ್ಲಾ ಪಕ್ಷದಲ್ಲೂ ಇದ್ದಾರೆ.ಅವರೆಲ್ಲಾ ನನಗೆ ಮತ ಹಾಕುತ್ತಿದ್ದರು.
ಈಗ ಅಧಿಕೃತವಾಗಿ ನನ್ನನ್ನು ಬೆಂಬಲಿಸುತ್ತಾರೆ ಎಂದರು
ಸಂಸದ ಪ್ರತಾಪಸಿಂಹ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ವಿಚಾರಕ್ಕೆ ಶಾಸಕ ಪ್ರದೀಪ್ ಈಶ್ವರರನ್ನು ಕೊಚ್ಚೆಗೆ ಹೋಲಿಸಿದ ಪ್ರತಾಪಸಿಂಹ, ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ.ತಿಳಿಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕುತ್ತಾರೆ.ನಾನು ತಿಳಿಗೇಡಿಯಲ್ಲ ನಾನು ಆ ಕೊಚ್ಚೆಗೆ ಕಲ್ಲು ಹಾಕಲ್ಲ ಎಂದರು ಹೇಳಿದರು.
ಫೆ 4ಕ್ಕೆ ಮೈಸೂರಿನಿಂದ ಅಯೋಧ್ಯೆಗೆ ಉಚಿತ ರೈಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೈಸೂರಿನಿಂದ ಫೆ 4ರಂದು ಅಯೋಧ್ಯೆಗೆ ಲಕ್ಷಾಂತರ ತೆರಳುತ್ತಾರೆ.
ನಾನು ಮತ್ತು ಶಾಸಕ ಶ್ರೀವತ್ಸ ರವರ ನೇತೃತ್ವದಲ್ಲಿ ಅನೇಕರು ತೆರಳುತ್ತಿದ್ದೇವೆ. ಮೈಸೂರಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು
ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಅಡ್ವಾಣಿ.ಕೋರ್ಟ್ ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್.ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಮೋದಿ. ಅಡ್ವಾಣಿಯಿಂದ ಮೋದಿವರೆಗೆ ರಾಮಜನ್ಮ ಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ.ರಾಮ ಜನ್ಮ ಭೂಮಿ ವಿಚಾರದಲ್ಲಿ ಕಾಂಗ್ರೆಸ್ ದು ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ ಅಪರಾಧಿ ಪ್ರಜ್ಞೆ ಕಾರಣ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅಯೋಧ್ಯಾಗೆ ಉದ್ಘಾಟನೆ ನಂತರ ಹೋಗುತ್ತೇನೆ ಹೇಳಿಕೆ ವಿಚಾರ.ರಾಮನ ಅಸ್ತಿತ್ವವನ್ನೆ ಪ್ರಶ್ನೆ ಮಾಡಿದ ಕಾಂಗ್ರೆಸ್ ಪಾಪಾ ತೊಳೆದು ಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದರು