ಮೈಸೂರು : ಎನ್ ಪಿ ಎಸ್ ರದ್ದು ಮಾಡಿ ಓಪಿಎಸ್ ಜಾರಿಗೆ ಒತ್ತಾಯಿಸಿ ಸೌತ್ ರೈಲ್ವೆ ಮಜ್ದೂರ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರದಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ನೌಕರರು.
ಸರದಿಯಲ್ಲಿ ಕರ್ತವ್ಯಕ್ಕೆ ರಜೆ ಹಾಕಿ ಪ್ರತಿಭಟನೆ ನಡೆಸಿ
2004 ರಲ್ಲಿ ಜಾರಿಗೆ ತಂದಿರುವರುವ ಎನ್ ಪಿ ಎಸ್ ಗೆ ತೀವ್ರ ವಿರೋಧ ತೋರಿದರು.ಕೇಂದ್ರ ಸರ್ಕಾರ ರೈಲ್ವೆ ಸಚಿವಾಲಯ ಮಧ್ಯಸ್ಥಿಕೆ ವಹಿಸಬೇಕು.
ಈ ಕೂಡಲೇ ಹೊಸ ರಾಷ್ಟ್ರೀಯ ಪಂಚಣಿ ಪದ್ದರಿ ರದ್ದು ಮಾಡಿ ಹಳೆ ಪಿಂಚಣಿ ಪದ್ದತಿಯನ್ನೇ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೂರಾರು ರೈಲ್ವೆ ನೌಕರರು ಭಾಗಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಕೂಡಲೇ ಎನ್ಪಿಎಸ್ ಹಿಂಪಡೆಯಬೇಕು ಇಲ್ಲ ಅಂದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ.
ಎಂದು ಪ್ರತಿಭಟನಾಕಾರರ ಎಚ್ಚರಿಕೆಯನ್ನೂ ಸಹ ಕೊಟ್ಟರು