– ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಬಿ.ವೈ.ವಿಜಯೇಂದ್ರ
– ದರುಶನ ವೇಳೆ ದರ್ಶನ್ ಧೃವನಾರಾಯಣ್ ಸಾಥ್
– ಇತ್ತೀಚಿಗೆ ನಂಜುಂಡನ ಸನ್ನಿಧಿಯಲ್ಲಿ ಭುಗಿಲೆದ್ದ ಅಂದಕಾಸುರ ಮತ್ತು ಮಹಿಷಾಸುರ ಘಟನೆಯ ವಿಚಾರದ ಬಗ್ಗೆ ನೋ ರಿಯಾಕ್ಷನ್ ಎಂದ ಬಿವೈ ವಿಜಯೇಂದ್ರ
ಮೈಸೂರು : ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.ತಮ್ಮ ತೂಕದಷ್ಟು ಬೆಲ್ಲ ದೇವಾಲಯಕ್ಕೆ ನೀಡಿ ಹರಕೆ ತೀರಿಸಿದ್ದಾರೆ.
ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಭಾಹವಹಿಸಲು ಆಗಮಿಸಿದ ಬಿ.ವೈ.ವಿಜಯೇಂದ್ರ ನಂಜನಗೂಡು ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.ನಂತರ ನಂಜುಂಡೇಶ್ವರನ ದರುಶನ ಪಡೆಯುವ ವೇಳೆ ಶಾಸಕ ದರ್ಶನ್ ಧೃವನಾರಾಯಣ್ ಸಹ ಆಗಮಿಸಿದ್ದಾರೆ. ಕಾಕತಾಳೀಯವೆಂತೆ ಇಬ್ಬರು ಯುವ ನಾಯಕರು ಪರಸ್ಪರ ಭೇಟಿ ಯಾಗಿ ಒಂದಾಗಿ ನಂಜುಂಡನ ದರುಶನ ಪಡೆದಿದ್ದು ವಿಶೇಷವಾಗಿತ್ತು.