ಮೈಸೂರು : ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವರಿಗೆ ಅಪಮಾನ ಖಂಡಿಸಿ ಪ್ರತಿಭಟನೆ
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸನಾತನ ಧರ್ಮಕ್ಕೆ ಜಯವಾಗಬೇಕು ದೈವ ದ್ರೋಹಿಗಳಿಗೆ ಶಿಕ್ಷೆಯಾಗಬೇಕು.ದೇವರಿಗೆ ಅಗೌರವ ತೋರಿದವರ ಮೇಲೆ ಈ ಕೂಡಲೇ ಕ್ರಮ ತೆಗೆದುಕೊಳ್ಳಬೇಕು.ನಮ್ಮನ್ನು ಕಾಪಾಡುವ ದೈವಕ್ಕೆ ಶ್ರದ್ಧಾ ಭಕ್ತಿಯನ್ನು ಅರ್ಪಿಸಬೇಕು.
ಹಿಂದೂಪರ ಹೋರಾಟಕ್ಕೆ ಜಯವಾಗಬೇಕು
ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೆ ಇದ್ರೆ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು
ಕಿಡಿಗೇಡಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನಕಾರರ ಆಕ್ರೋಶ ಹೊರ ಹಾಕಿದರು