ಮೈಸೂರು : ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮನ ವಿಗ್ರಹವನ್ನು ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದ ಹಿನ್ನಲೆ ವಿ. ಆರ್ ಟ್ರಸ್ಟ್ ನ ವತಿಯಿಂದ ಅವರ ತಾಯಿ ಮತ್ತು ಅವರ ಧರ್ಮಪತ್ನಿಯನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೆ. ಹರೀಶ್ ಗೌಡ್ರು, ಮಾಜಿ ಶಾಸಕರಾದ ಸೋಮಶೇಖರ್ ರವರು, ವಿ ಆರ್ ಟ್ರಸ್ಟ್ ನ ಸ್ಥಾಪಕರಾದ ಶುಶ್ರುತ್ ಗೌಡ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೂರ್ತಿ ರವರು, ಕಾಂಗ್ರೆಸ್ ಪಕ್ಷದ ಮುಖಂಡರಾದ , ಮೊದಾಮನಿ, ಪ್ರಕಾಶ್, ಭಾಸ್ಕರ್ ಎಲ್ ಗೌಡ, ಡೈರಿ ವೆಂಕಟೇಶ್ ನಿಖಿಲ್, ಮನೋಜ್ ಮತ್ತಿತರರು ಹಾಜರಿದ್ದರು.