ಮೈಸೂರು : ಸಾಹಸಸಿಂಹ ವಿಷ್ಣುವರ್ಧನ್ ರವರ 14ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉದ್ಬೂರು ಗೆಟ್ ಬಲಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದು 50ಕ್ಕೂ ಹೆಚ್ಚು ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು
ರಕ್ತದಾನ ಶಿಬಿರವನ್ನು ವಿಷ್ಣುವರ್ಧನ್ ಅಳಿಯ ಅನಿರುದ್ ರವರು ಉದ್ಘಾಟಿಸಿ ಮಾತನಾಡಿದರು
ವಿಷ್ಣುವರ್ಧನ್ ರವರ ಅಳಿಯ ಚಿತ್ರನಟ ಅನಿರುದ್ಧ್ ರವರು ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ರವರ ಅಭಿಮಾನಿಗಳು ವಿಶ್ವದೆಲ್ಲಡೆಯಿದ್ದಾರೆ, ಇಂದು14ನೇ ವರ್ಷದ ಪುಣ್ಯಸ್ಮರಣೆ ಅಭಿಮಾನಿಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮ ಅನ್ನಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ ಸಮಾಜಮುಖಿ ಕಾರ್ಯಕ್ರಮಗಳನ್ನ ಆಯೋಜಿಸಿದ್ದಾರೆ, ವಿಷ್ಣುಸ್ಮಾರಕದಲ್ಲಿ ಪ್ರತಿವಾರ
ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದವರು ರಕ್ತದಾನ ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು ಶ್ಲಾಘನೀಯವಾದ ಕೆಲಸವಾಗಿದ್ದು ಗ್ರಾಮೀಣ ಮತ್ತು ನಗರ ಪ್ರದೇಶ ಬಡಾವಣೆಗಳಲ್ಲಿ ವಿಷ್ಣು ಅಪ್ಪಾಜಿ ರವರ ಭಾವಚಿತ್ರವಾಕಿ ಸಮಾಜಮಖಿ ಕೆಲಸ ಮಾಡುತ್ತಿದ್ದಾರೆ, ಅವರ ಚಿತ್ರಗಳು ಕೌಟುಂಬಿಕ ಪ್ರಧಾನವಾಗಿದ್ದವು ಸಮಾಜದಲ್ಲಿ ಶ್ರಮಜೀವಿಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ, ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಅಭಿಮಾನಿಗಳ ಹೋರಾಟ ಮಾಡುತ್ತಿದ್ದು ಬಾಲಣ್ಣ ರವರ ಕುಟುಂಬಕ್ಕೆ ಮನವಿ ಮಾಡಿದ್ದೇನೆ, 10ಗುಂಟೆ ಜಾಗವನ್ನ ಕೇಳಿದ್ದೇವೆ ಇದರ ಬಗ್ಗೆ ಸರ್ಕಾರದ ನಿರ್ಧಾರಗಳು ಬೇಗ ಸಮ್ಮತಿಸಿದರೇ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿಯಾಗುತ್ತದೆ ಎಂದರು
ಇದೇ ಸಂದರ್ಭದಲ್ಲಿ ಜೀವಸಾರ ರತ್ನ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ರೋಟರಿ ಕ್ಲಬ್ ಸೌತ್ ಈಸ್ಟ್ ಕಾರ್ಯದರ್ಶಿ ಎನ್ ಟಿ ಗಿರೀಶ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ವಿಷ್ಣುಸೇನಾ ಅಧ್ಯಕ್ಷ ಶ್ರೀಕಂಠೇಗೌಡ, ಮರಟಿ ಕ್ಯಾತನಹಳ್ಳಿ ಮಂಜು, ವರುಣ ಮಹದೇವ್,
ಜಟ್ಟಿ ಹುಂಡಿಗೋಪಾಲ್, ರಶ್ಮಿ ,ಪ್ರಭು, ಸುರೇಶ್, ಹಾಗೂ ಇನ್ನಿತರರು ಹಾಜರಿದ್ದರು