ಮೈಸೂರು : ಕಾಂಗ್ರೆಸ್ ನ 138 ಸಂಸ್ಥಾಪನಾ ದಿನಾಚರಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ನಿಗದಿಯಾಗಿದ್ದ ಸಮಯಕ್ಕೆ ಬಾರದ ಕಾರಣ ದ್ವಜರೋಹಣ ಕಾರ್ಯಕ್ರಮ ತಡವಾಗಿದೆ.
ಧ್ವಜಾರೋಹಣಕ್ಕೆ ಕಾರ್ಯಕರ್ತರು ಸುಮಾರು ಒಂದೂವರೆ ಗಂಟೆಯಿಂದಲೂ ಕಾದು ನಿಂತಿದ್ದಾರೆ.
9.30 ಕ್ಕೆ ನಿಗದಿಯಾಗಿದ್ದ ಸಮಯ ಗಂಟೆ 11 ಆದರೂ ಸಚಿವ ಮಹದೇವಪ್ಪ ಕಾರ್ಯಕ್ರಮಕ್ಕೆ ಬಂದಿಲ್ಲ. ಜಿಲ್ಲಾ ಉಸ್ತುವಾರಿಗಳಿಂದಲೇ ಧ್ವಜಾರೋಹಣ ನೆರವೇರಿಸಲು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಾದು ಕುಳಿತಿದ್ದರು. ಕೊನೆಗೆ ಕಾರ್ಯಕರ್ತರೇ ಧ್ವಜಾರೋಹಣ ಮಾಡಿದ್ದಾರೆ. ಅಲ್ಲದೆ ಇತ್ತೀಚಿಗೆ ಜಿಲ್ಲಾ ಮಂತ್ರಿಗಳು ಸರ್ಕಾರಿ ಕಾರ್ಯಕ್ರಮವಿರಲಿ ಪಕ್ಷದ ಕಾರ್ಯಕ್ರಮವೇ ಇರಲಿ ಸರಿಯಾದ ಸಮಯಕ್ಕೆ ಬಾರದೆ ಇರುವುದನ್ನು ಪತ್ರಕರ್ತರು ಕೂಡ ಪ್ರಶ್ನೆ ಮಾಡಿದ್ದಾರೆ. ಇಂದು ಇದೇ ವಿಷಯವನ್ನು ಕಾರ್ಯಕರ್ತರು ಕೂಡ ಗುಸುಗುಸು ಮಾತನಾಡಿಕೊಳ್ಳುತ್ತಿದ್ದು ಕಂಡು ಬಂದಿದೆ