ಮೈಸೂರು : ಕಾಡಿನಿಂದ ನಾಡಿಗೆ ಅನೇಕ ವನ್ಯಜೀವಿಗಳು ಧಾವಿಸುತ್ತಿದ್ದು ಟಿ ನರಸೀಪುರ ಪಟ್ಟಣದಲ್ಲಿ 2 ಕರಡಿಗಳು ಪ್ರತ್ಯಕ್ಷವಾಗಿವೆ. ಬೆಳ್ಳಂ ಬೆಳಗ್ಗೆ ಮುಂಜಾನೆ ನಾಲ್ಕರ ಸಮಯ ಪಟ್ಟಣದ ಕಡ್ಲೆ ರಂಗಮ್ಮನ ಬೀದಿಯಲ್ಲಿ ಕರಡಿಗಳು ಕಾಣಿಸಿಕೊಂಡು ಪಟ್ಟಣದ ಜನತೆ ಭಯಭೀತರಾಗಿದ್ದಾರೆ.
ಪಟ್ಟಣದ ಶ್ರೀ ಗುಂಜ ನರಸಿಂಹ ಸ್ವಾಮಿ ದೇವಾಲಯ, ಕಡ್ಲೆ ರಂಗಮ್ಮನ ಬೀದಿ ಮತ್ತು ಶ್ರೀರಾಂಪುರದ ಬೀದಿಯ ವಾಲ್ಮೀಕಿ ಶಾಲೆ ಸಮೀಪ ಕರಡಿಗಳು ಓಡಾಡಿವೆ
ಟಿ ನರಸೀಪುರ ಜನತೆಯಲ್ಲಿ ಆತಂಕ ಮನೆ ಮಾಡಿದ್ದು
ಕರಡಿಗಳ ಸೆರೆಗಾಗಿ ಅರಣ್ಯ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ