ಮೈಸೂರು : ಮೈಸೂರಿನಲ್ಲಿ ಒಟ್ಟು 7 ಕೊರೊನಾ ಪ್ರಕರಣ ಪತ್ತೆಯಾಗಿದೆ.7ನೇ ಪ್ರಕರಣ ಸಹಾ ಅನಾರೋಗ್ಯದಿಂದ ಬಳಲುತ್ತಿದ್ದವರಾಗಿದ್ದಾರೆ.ಯಾರಿಗೂ ಟ್ರ್ಯಾವಲ್ ಹಿಸ್ಟರಿ ಇಲ್ಲ ಆದ್ದರಿಂದ ಆತಂಕ ಪಡುವ ಅಗತ್ಯ ಇಲ್ಲ
ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹೇಳಿದ್ದಾರೆ.
ಸದ್ಯ ಮೈಸೂರಿನಲ್ಲಿ 70 ಟೆಸ್ಟಿಂಗ್ ಮಾಡಲಾಗುತ್ತಿದೆ
ರೋಗ ಲಕ್ಷಣ ಇದ್ದವರಿಗೆ ಮಾತ್ರ ಟೆಸ್ಟಿಂಗ್ ಮಾಡಲಾಗುತ್ತಿದೆ.1 ಸಾವಿರ ಟೆಸ್ಟಿಂಗ್ ಮಾಡುವ ಸಾಮರ್ಥ್ಯ ನಮಗಿದೆ. ಸದ್ಯ ಪ್ರವಾಸಿ ತಾಣಗಳಲ್ಲಿ ಟೆಸ್ಟಿಂಗ್ ಮಾಡುವ ಅವಶ್ಯಕತೆ ಇಲ್ಲ.
ಹೊಸವರ್ಷದ ಆಚರಣೆಗೂ ಯಾವುದೇ ನಿರ್ಬಂಧ ಇಲ್ಲ
60 ವರ್ಷ ಮೇಲ್ಪಟ್ಟವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಒಳಾಂಗಣ ಕಾರ್ಯಕ್ರಮದಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಗಡಿ ಭಾಗದಲ್ಲಿ ನಿಗಾ ಇರಿಸಲಾಗಿದೆ ಎಂದು ಜಿಲ್ಲಧಿಕಾರಿಗಳಾದ ರಾಜೇಂದ್ರ ತಿಳಿಸಿದರು