ಮೈಸೂರು : ಮೈಸೂರು ಪತ್ರಕರ್ತರ ವತಿಯಿಂದ ನೂತನ ಪತ್ರಕರ್ತರ ಭವನದ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ನೀವೆಷ್ಟು ತ್ವರಿತವಾಗಿ ಕಟ್ಟಿಸುತ್ತೀರ ಅಷ್ಟು ಒಳ್ಳೆಯದು ನಾನೇ ಶಂಕುಸ್ಥಾಪನೆ ಮಾಡಿ ನಾನೇ ಉದ್ಘಾಟನೆ ಮಾಡಬೇಕೆಂಬ ಆಸೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಯುವ ಪತ್ರಕರ್ತರಿಗೆ ತರಬೇತಿ ಕೊಡುವ ಆಲೋಚನೆ ಸ್ವಗಾತಾರ್ಹ ವಿಚಾರ.ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡವವನು.
ಪತ್ರಿಕಾರಂಗದ ಸ್ವಾತಂತ್ರ್ಯ ಕೂಡ ಅಷ್ಟೇ ಮುಖ್ಯ.
ಪತ್ರಿಕಾ ರಂಗ ನಾಲ್ಕನೇ ಅಂಗ ಅದು ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯತೆ.
ವಸ್ತುನಿಷ್ಠ ವಿಚಾರ,ಸತ್ಯ ಸಂಗತಿಗಳನ್ನು ತಿಳಿಸಬೇಕು, ತಪ್ಪು ಮಾಹಿತಿ ನೀಡಬಾರದು.ಅದರಿಂದ ಯಾರಿಗೂ ಪ್ರಯೋಜನ ಇಲ್ಲ.ನಮ್ಮ ಸಮಾಜದ ವ್ಯವಸ್ಥೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.
ಸಮಾಜದಲ್ಲಿರುವ ಸಾಮಾಜಿಕ ಅಸಮಾನತೆ ಚಿತ್ರವನ್ನ ಜನರ ಮುಂದೆ ಇಡಬೇಕು.ಅಸಮಾನತೆ ನಿರ್ಮೂಲದ ಪ್ರಯತ್ನ ನಡೆಯುತ್ತದೆಯಾ ಇಲ್ವಾ ಎಂದು ತಿಳಿಸಿಕೊಡಬೇಕು ಎಂದರು.
ಪತ್ರಿಕಾ ರಂಗದಲ್ಲಿ ಇತ್ತೀಚೆಗೆ ವೃತ್ತಿಪರತೆ ಹೋಗಿ ಕಮರ್ಷಿಯಲ್ ಆಗಿದೆ ಎಂದು ಬೇಸರ ವ್ಯಕ್ತಿ ಪಡಿಸಿದ ಸಿಎಂ.ಮೈಸೂರು ಪತ್ರಿಕೆಗೆ ಸುಮಾರು 90 ವರ್ಷಗಳ ಇತಿಹಾಸ ಇದೆ.ಪತ್ರಿಕೆ ಓದುವವರಿಗೆ ಇಂದು ಏನಿದೆ ಎಂಬ ಕುತೂಹಲ ಬೆಳೆಸಬೇಕು.ಆ ಕುತೂಹಲ ಆಸಕ್ತಿ ಇಲ್ಲ ಅಂದರೆ ಪತ್ರಿಕಾ ರಂಗ ತನ್ನ ಜವಾಬ್ದಾರಿ ಮರೆತಿದೆ ಎಂಬುದು ನನ್ನ ಅಭಿಪ್ರಾಯ.ಅನಗತ್ಯ ವೈಭವೀಕರಣ ಮಾಡೋದು ಸರಿಯಲ್ಲ.ನನ್ನ ಕಾರಿಮ ಮೇಲೆ ಕಾಗೆ ಕೂತತ್ತು ಎಂಬ ವಿಚಾರವನ್ನೇ ಸುಮ್ಮನೆ ಎಳೆಯೋದು.
ಮೌಡ್ಯ ಕಂದಾಚಾರಗಳನ್ನ ನೀವೇ ಬೆಳೆಸುವ ಕೆಲಸ ಮಾಡಬಾರದು ಎಂದರು.
ಗಂಡ ಹೆಂಡತಿ ಜಗಳನೇ ದೊಡ್ಡ ಸುದ್ದಿ ಮಾಡೋದು.
ಅವರ ಮಾನ ಮರ್ಯಾದೆ ಕಳೆಯೋದು.
ಇದನ್ನೇ ದೊಡ್ಡದು ಮಾಡಿ, ಊಹಾಪೋಹಗಳನ್ನ ಇಟ್ಟುಕೊಂಡು ಸುದ್ದಿ ಮಾಡಬಾರದು.
ಇವರಿಂಗಂದರು ನೀವೇನು ಹೇಳ್ತೀರಾ ಅನ್ನೋದೆ ಇವತ್ತು ಹೆಚ್ಚಾಗಿದೆ.ಪತ್ರಿಕೋದ್ಯಮ ಓದದೇ ಇರುವವರು ಬಂದು ವ್ಯವಸ್ಥೆ ಆಳುಮಾಡುತ್ತಿದ್ದಾರೆ.ಪ್ರತಿಯೊಬ್ಬ ವ್ಯಕ್ತಿಗೂ ಅಭಿಪ್ರಾಯ ಹೇಳಿಕೊಳ್ಳುವ, ಮಾತನಾಡುವ ಹಕ್ಕು ಇರಬೇಕು ಎಂದರು.
ಸ್ವಾತಂತ್ರ್ಯ ಬಂದು 76 ವರ್ಷಗಳು ಕಳಿದಿದೆ.
ಆದರೂ ಸಮಾಜದಲ್ಲಿ ಅಸಮಾನತೆ ಹೋಗಿಲ್ಲ.
ಸಂವಿಧಾನ ವಿರೋಧಿಗಳನ್ನೂ ಗೌರವಿಸುವ ಕೆಲಸವಾಗಬಾರದು.ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ಕರೆಯೋದಾ.?ಪತ್ರಕರ್ತರಿಗೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ಮಾಡಿಕೊಂಡ ಬಂದಿದೆ.
ನಾನು ಏನೇ ಮಾಡಬೇಕಾದರೂ ಸಮಾಜಕ್ಕೆ ಉಪಯುಕ್ತವಾಗು ನಿಟ್ಟಿನಲ್ಲಿ ಒಳ್ಳೆಯದಾದರೆ ಅದನ್ನ ಮಾಡಲು ನಾನು ಸದಾ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು