ಮೈಸೂರು: ರಾಮಮಂದಿರ ನಿರ್ಮಾಣವಾಗಲು ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಕಾರಣ.
ಎಚ್.ಡಿ.ದೇವೇಗೌಡ ರಾಮಮಂದಿರ ವಿರೋಧ ಮಾಡಿದ್ದರು.ನೀವು ದೇವೇಗೌಡನ್ನು ಬನ್ನಿ ಅನ್ನುತ್ತೀರಿ, ಅಡ್ವಾಣಿ ಅವರನ್ನು ಬರಬೇಡಿ ಅನ್ನುತ್ತೀರಿ.
ಈ ಇಬ್ಬಂದಿತನ ಯಾಕೆ ಎಂದು ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಪ್ರಶ್ನೆ ಮಾಡಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಪರ್ಯಾಯವಾಗಿ ಬಿಜೆಪಿ ಬೆಳೆಯಲು ಎಲ್.ಕೆ. ಅಡ್ವಾಣಿ ಕಾರಣ.
ದೇಶಾದ್ಯಂತ ಯಾತ್ರೆ ಮಾಡಿ ಹಿಂದೂ ಪರವಾಗಿ ಜನರನ್ನು ಬಡಿದೆಬ್ಬಿಸಿದರು.ಅಂತಹ ಹಿರಿಯರನ್ನು ಗೌರವಿಸಬೇಕಾದ್ದು ನಿಮ್ಮ ಜವಾಬ್ದಾರಿ.
ಅಡ್ವಾಣಿ ಬಂದರೆ ನನಗೆ ಕ್ರೆಡಿಟ್ ಸಿಗೋದಿಲ್ಲ, ಮಸುಕಾಗುತ್ತೇನೆ ಅಂತ ಪ್ರಧಾನಿ ಮೋದಿ ಅಂದುಕೊಂಡಿದ್ದಾರೆ.ಆದ್ದರಿಂದಲೇ ವಯಸ್ಸಿನ ಕಾರಣ ಅಡ್ವಾಣಿ, ಜೋಷಿ ಅವರನ್ನು ಹೊರಗಿಡುತ್ತಿದ್ದೀರಿ.
ದೇವೇಗೌಡರಿಗೆ ವಯಸ್ಸು ಆಗಿಲ್ವ ?ಅವರ ಆರೋಗ್ಯ ಚನ್ನಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ಕೋವಿಡ್ ಪ್ರಾರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಕುಂಭಮೇಳ ಮಾಡಿತ್ತು.ಅದರಿಂದ ದೇಶಾದ್ಯಂತ ಕೋವಿಡ್ ಹರಡಿ ಸಾವು,ನೋವುಗಳಾದವು.
ರಾಮಮಂದಿರ ಎಷ್ಟು ಜನರನ್ನು ಬಲಿ ಪಡೆಯುತ್ತೋ ಗೊತ್ತಿಲ್ಲ.ಚುನಾವಣೆ ಕಾರಣಕ್ಕೆ ಅಪೂರ್ಣವಾದ ಮಂದಿರ ಉದ್ಘಾಟನೆ ಮಾಡುತ್ತಿದ್ದೀರಿ.ಕೋವಿಡ್ ಹರಡದಂತೆ ಜಾಗೃತೆ ವಹಿಸಿ ಎಂದು ಎಚ್.ವಿಶ್ವನಾಥ್ ಹೇಳಿದರು