ಮೈಸೂರು : ಸಂಸತ್ನಲ್ಲಿ ಯುವಕರಿಂದ ಕೋಲಾಹಲ ಪ್ರಕರಣಕ್ಕೆ ಸಂಭಂದಿಸಿದಂತೆ ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಪ್ರತಾಪ್ ಸಿಂಹ ಕೈನಲ್ಲಿ ಬಾಂಬ್ ಹಾಗೂ ಪಾಸ್ ಹಿಡಿದು ಭಾವ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಯುವಕರಿಗೆ ಪ್ರತಾಪ್ ಸಿಂಹ ಪಾಸ್ ನೀಡಿರುವ ಹಿನ್ನಲೆ ಪ್ರತಾಪ್ ಸಿಂಹರನ್ನು ಸಂಸದ ಸ್ಥಾನದಿಂದ ವಜಾ ಮಾಡ್ಬೇಕು ಎಂದು ಸಹಿ ಸಹ ಸಂಗ್ರಹ ಮಾಡಲಾಗುತ್ತಿತ್ತು. ಮೈಸೂರು ಮಹಾರಾಜ ಕಾಲೇಜು ಮೈದಾನದ ಬಳಿ ಫ್ಲೆಕ್ಸ್ ಹಾಕಿ ಸಹಿ ಸಂಗ್ರಹ ಮಾಡುತ್ತಿದ್ದ ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಬಂದು ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು ಈ ವೇಳೆ
ಸಿಬ್ಬಂದಿ ಜೊತೆ ಹಿಂದುಳಿದ ಜಾಗೃತಿ ವೇದಿಕೆ ಸದಸ್ಯರ ಮಾತಿನ ಚಕಮಕಿ ನಡೆಯಿತು.