ಮೈಸೂರು : ಮೈಸೂರಿನಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದೇವರಾಜ ಮೊಹಲ್ಲಾದಲ್ಲಿ ನಡೆದಿದೆ.ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಏಕಾ ಏಕಿ ಹಲ್ಲೆ ಮಾಡಿದ್ದಾರೆ. 6 ರಿಂದ 7 ಜನರ ಗುಂಪಿನಿಂದ ಹಲ್ಲೆ ಎಂದು ತಿಳಿದುಬಂದಿದ್ದು ಮಾರಕಾಸ್ತ್ರಗಳಿಂದ ಏಕಾಏಕಿ ವ್ಯಕ್ತಿ ಮೇಲೆ ಮಚ್ಚು ಬೀಸಿದ್ದಾರೆ.
ಹಲ್ಲೆ ನಡೆಸಿ ವ್ಯಕ್ತಿ ಕೆಳಗೆ ಬೀಳುತ್ತಿದ್ದಂತೆ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹಲ್ಲೆಗೊಳಗಾದವನ ಗುರುತು ಪತ್ತೆಯಾಗಿಲ್ಲ ಸ್ಥಳಕ್ಕೆ ದೇವರಾಜ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ