ಚಾಮರಾಜನಗರ: ಕಾಡಿನಿಂದ ಹಾದಿ ತಪ್ಪಿ ಬಂದ ಕರಡಿಯೊಂದು ಆಹಾರಕ್ಕಾಗಿ ಬಾರ್ ಬಳಿಯ ಅಂಗಡಿಯೊಳಗೆ ನುಗ್ಗೆ ಅಲ್ಲಿದ್ದ ಮೊಟ್ಟೆ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದು ದ್ವಂಸ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದ ಅಣತಿ ದೂರದಲ್ಲಿ ಇರುವ ಕಾಡಿನಿಂದ ದಾರಿತಪ್ಪಿ ಬಂದ ಕರಡಿಯು ಶನಿವಾರ ಮುಂಜಾನೆ ಅಂಗಡಿಯೊಳಗೆ ಪ್ರವೇಶ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಬರವಸೆ ನೀಡಿದ್ದಾರೆ.
ಕರಡಿ ಹಠತ್ತಾಗಿ ಆಗಮಿಸಿ ಅಂಗಡಿಯೊಳಗೆ ನುಗ್ಗಿ ದ್ವಂಸ ಮಾಡಿದ್ದನ್ನು ಗಮನಿಸಿ ಗ್ರಾಮಸ್ಥರು ಭಯದಲ್ಲಿದ್ದಾರೆ .