ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ತೆರೆಳಿದ್ದ ಪ್ರವಾಸಿಗರಿಂದ ವಾಹನ ಮೇಲೆ ರೊಚ್ಚಿಗೆದ್ದ ಕಾಡಾನೆಯೊಂದು ದಾಳಿಗೆ ಯತ್ನಿಸಿದ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯ ತೆರೆದ ಸಫಾರಿ ವಾಹನದಲ್ಲಿ ಪ್ರವಾಸಿಗರು ತೆರಳಿದ್ದಾಗ ಎದುರಿಗೆ ಬಂದ ಕಾಡಾನೆಯೊಂದು ಪ್ರವಾಸಿಗರನ್ನು ಕಂಡು ರೊಚ್ಚಿಗೆದ್ದು ತನ್ನ ಉದ್ದನೆಯ ದಂತದೊಂದಿಗೆ ವಾಹನದ ಮೇಲೆ ದಾಳಿ ಮಾಡಲು ಯತ್ನಿಸಿತು.
ಸಫಾರಿ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದಾಗಿ ವಾಹನವನ್ನು ಹಿಂದಕ್ಕೆ ಚಲಾಯಿಸಿ ಪ್ರವಾಸಿಗರನ್ನು ರಕ್ಷಿಸಿದ ಘಟನೆ ನಡೆಯಿತು. ಸಫಾರಿಗೆ ತೆರಳುವ ಪ್ರವಾಸಿಗರು ಎಚ್ಚರವಹಿಸುವುದು ಸೂಕ್ತವಾಗಿದೆ.