ಮೈಸೂರು : ಜಿಯೋ ಕೇಬಲ್ ಎಳೆಯುವಾಗ ನೀರಿನ ಪೈಪ್ ಒಡೆದ ಹಿನ್ನೆಲೆ ಕೇಬಲ್ ಗುತ್ತಿಗೆದಾರನಿಗೆ ಪಾಲಿಕೆ ಸದಸ್ಯೆ ತರಾಟೆಗೆ ತೆಗೆದುಕೊಂಡ ಘಟನೆ ಮೈಸೂರಿನ ಗಾಂಧಿನಗರದಲ್ಲಿ ನಡೆದಿದೆ.
ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ
ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಪೈಪ್ ಸರಿ ಮಾಡಿಸಿಕೊಡುವುದಾಗಿ ಹೇಳಿದರು ಕೇಳದೆ ನಿಂದಿಸಿದ ಆರೋಪ. 20ನೇ ವಾರ್ಡ್ ಬಿಜೆಪಿ ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ವಿರುದ್ದ ಆರೋಪ
ಗುತ್ತಿಗೆದಾರ ಪ್ರದೀಪ ಅವರಿಂದ ಆರೋಪ
ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದರು ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಈಗ ಅಧಿಕಾರಿಗಳು ಪ್ರಶ್ನೆ ಮಾಡಬೇಕಿತ್ತು
ಆದರೆ ವಿನಾಕಾರಣ ಇವರು ತೊಂದರೆ ಕೊಡುತ್ತಿದ್ದಾರೆ ಅಂತಾ ಆರೋಪ ಈ ಬಗ್ಗೆ ಸ್ಪಷ್ಟನೆ ನೀಡಿದ ಅಶ್ವಿನಿ
ಒಂದು ತಿಂಗಳ ಹಿಂದೆ ಹೊಸ ರಸ್ತೆಯಲ್ಲಿ ಹಳ್ಳ ತೆಗೆಯಲಾಗಿತ್ತು.ಅನುಮತಿ ಪಡೆಯದೇ ಹಳ್ಳ ತೆಗೆಯಲಾಗಿತ್ತು ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.15 ದಿನವಾದರೂ ಪೈಪ್ ಸರಿ ಮಾಡಿರಲಿಲ್ಲ, ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತುಈ ಹಿನ್ನೆಲೆ ಕೆಲಸ ನಿಲ್ಲಿಸಲಾಗಿತ್ತು
ಈಗ ಪೈಪ್ ರೆಡಿ ಮಾಡಿಸದೆ ಕೆಲಸ ಮಾಡಲು ಬಂದಿದ್ದಾರೆ
ಈ ಹಿನ್ನೆಲೆಯಲ್ಲಿ ಆತನಿಗೆ ಈ ಬಗ್ಗೆ ಕೇಳಲಾಯ್ತು
ಈ ವೇಳೆ ನಮಗೆ ಮೊದಲು ಅವರೇ ಅವಾಚ್ಯ ಶಬ್ಧದಿಂದ ನಿಂದಿಸಿದರು ಎಂದು ಅಶ್ವಿನ್ ಶರತ್ ಸ್ಪಷ್ಟನೆ ನೀಡಿದರು