ಬೆಳಗಾವಿ : ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಸಹಜವಾಗಿಯೇ ಬಿಜೆಪಿಗೆ ಖುಷಿ ತಂದಿದೆ. ಇಂದಿನಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಉತ್ತರ ಭಾರತದ ಗೆಲುವಿನಿಂದ ಫುಲ್ ಜೋಷ್ನಲ್ಲಿರುವ ಬಿಜೆಪಿ, ವಿಪಕ್ಷಗಳಿಗೆ ಸಮರ್ಥವಾಗಿ ಕೌಂಟರ್ ನೀಡಲು ಸಜ್ಜಾಗಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್, ಹೆಚ್.ಡಿ ಕುಮಾರಸ್ವಾಮಿ, ವಿಜಯೇಂದ್ರರಿಂದ ಜೋಡಿ ಅಸ್ತ್ರಗಳು ಮುಗಿಬೀಳಲು ಸಜ್ಜಾಗಿದ್ದಾರೆ. ಸರ್ಕಾರದ ವೈಫಲ್ಯಗಳ ಕುರಿತು ಅಧಿವೇಶನದಲ್ಲಿ ಜಂಟಿ ಹೋರಾಟ ನಡೆಯುವುದು ಖಚಿತವಾಗಿದೆ. ಅಧಿವೇಶನದ ಮೊದಲ ದಿನದಿಂದಲೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ದೋಸ್ತಿಗಳ ಪ್ಲ್ಯಾನ್ ನಡೆದಿದೆ. ಬಿಜೆಪಿ-ಜೆಡಿಎಸ್ ಜಂಟಿ ಅಸ್ತ್ರಕ್ಕೆ ಕಾಂಗ್ರೆಸ್ ಕೌಂಟರ್ ಏನು ಅನ್ನೋದು ಕುತೂಹಲ ಮೂಡಿಸಿದೆ