ಮೈಸೂರು : ಜಮೀನಿನ ವಿಚಾರವಾಗಿ ಅಣ್ಣತಮ್ಮಂದಿರ ನಡುವೆ ಶುರುವಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣನ ಮಗನೇ ಚಿಕ್ಕಪ್ಪನನ್ನ ಕೊಂದಿದ್ದಾನೆ.ಜಿಲ್ಲೆ ನಂಜನಗೂಡು ತಾಲ್ಲೂಕಿನ ಮರಳ್ಳಿಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಪರಶಿವಪ್ಪ(65) ಮೃತ ದುರ್ದೈವಿ.
ಪರಶಿವಪ್ಪನ ಅಣ್ಣನ ಮಗ ಆದೀಶ್ ಕೊಂದ ಆರೋಪಿ ಎನ್ನಲಾಗಿದೆ .ಜಮೀನು ವಿಚಾರದಲ್ಲಿ ಪರಶಿವಪ್ಪ ಹಾಗೂ ಅಣ್ಣ ಪ್ರಭುಸ್ವಾಮಿ ನಡುವೆ ಗಲಾಟೆ ನಡೆದಿತ್ತು.ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಭುಸ್ವಾಮಿ ಮಗ ಅದೀಶ್ ಚಿಕ್ಕಪ್ಪನಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಹಾಕಿದ್ದಾನೆ.ತೀವ್ರವಾಗಿ ಗಾಯಗೊಂಡ ಪರಶಿವಪ್ಪರನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಪರಶಿವಪ್ಪ ಮೃತಪಟ್ಟಿದ್ದಾರೆ.ಆರೋಪಿಗಳಾದ ಪ್ರಭುಸ್ವಾಮಿ ಹಾಗೂ ಅದೀಶ್ ತಲೆ ಮರೆಸಿಕೊಂಡಿದ್ದಾರೆ.
ಕವಲಂದೆ ಪೊಲೀಸ್ ಠಾಣೆಯ ಪಿ ಎಸ್ ಐ ಕೃಷ್ಣ ಕಾಂತ್ ಕೋಳಿ ಎ ಎಸ್ ಐ ಲಿಂಗದೇವರು ನಾಗು ಗಣೇಶ್ ಸಿಬ್ಬಂದಿಗಳು ಪರಿಶೀಲನೆ ಮಾಡಿ ಪ್ರಕರಣ ದಾಖಲಾಗಿದೆ.ಆರೋಪಿಗಳ ಸೆರೆಗೆ ಬಲೆ ಬಿಸಿದ್ದಾರೆ.