ಬೆಂಗಳೂರು : ಸರ್ಕಾರ ಬಂದ ಕೂಡಲೇ ಸಾರ್ವಜನಿಕ ವರ್ಗಾವಣೆಗೆ ಆದೇಶ ಮಾಡ್ತು. ಅಲ್ಲಿಂದಲೇ ಭ್ರಷ್ಟಾಚಾರ ಶುರುವಾಯ್ತು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಪುತ್ರ ಯತೀಂದ್ರ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಸಾಕ್ಷಿ ಕೊಡಿ ಅಂದ್ರೆ ಮಾಧ್ಯಮ ಹಾಗೂ ವಿರೋಧ ಪಕ್ಷದ ಮುಂದೆ ಹಣ ಪಡೆದು ವರ್ಗಾವಣೆ ಮಾಡ್ತಾರಾ? ಅದು ಯಾಕಾಯ್ತು? ಒಂದೊಂದು ಸರ್ಕಲ್ ಗೆ ಒಂದೊಂದು ಕೋಟಿ 75 ಲಕ್ಷಕ್ಕೆ ಸೇಲ್ ಆಯ್ತು. ಅಷ್ಟು ಕೊಟ್ಟು ಬಂದು ಅವರು ಎಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಸಣ್ಣ ಪೋಸ್ಟ್ ಗಳಿಗು ಸಹ ಹಣ ಪಡೆದಿದ್ದಾರೆ ಅದಕ್ಕೆಲ್ಲ ಸಾಕ್ಷಿ ಮೊನ್ನೆ ಸಿಕ್ಕ ಆಡಿಯೋ ಎಂದರು.
ಸಿಎಂ ಮಗ ಸಿಎಂ ವ್ಯವಹಾರ ಎಲ್ಲವನ್ನೂ ಮಾಡ್ತಿದ್ದಾರೆ ಅಂತ ಎಲ್ಲೆಡೆ ಹೇಳ್ತಿದ್ದಾರೆ ಅದು ಸತ್ಯ. ಪ್ರೂ ಮಾಡಿದ್ರೆ ರಾಜೀನಾಮೆ ಕೊಡ್ತೇವೆ ಅನ್ನೋದು ಎಲ್ಲಾ ಮೆಲ್ನೋಟಕ್ಕೆ ಹೇಳುವುದು. ಅವರ ಆತ್ಮಸಾಕ್ಷಿಯನ್ನು ಅವರು ಪ್ರಶ್ನೆ ಮಾಡಿಕೊಳ್ಳಲಿ. ನನ್ನ ಅನುಭವದಲ್ಲಿ ಇಷ್ಟು ಕಡು ಭ್ರಷ್ಟ ಸರ್ಕಾರವನ್ನ ನಾನು ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷ ನಾಯಕನ ಆಯ್ಕೆಯಿಂದ ಬಿಜೆಪಿಯಲ್ಲಿ ಅಸಮಧಾನ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ತೀರ್ಮಾನದಂತೆ ಶಾಸಕರ ಅಭಿಪ್ರಾಯದಂತೆ ಕೊಟ್ಟಿದ್ದಾರೆ ಅದನ್ನ ನಾವು ಒಪ್ಪಬೇಕು. ಬೆಂಗಳೂರಿನವರಿಗೆ ವಿಪಕ್ಷ ಸ್ಥಾನ ಕೊಟ್ಟಿದ್ದಾರೆ. ಶಾಸಕರಾದಾಗಲಿಂದಲೂ ಮಂತ್ರಿ ಡಿಸಿಎಂ ಎಲ್ಲ ಅವರಿಗೆ ಕೊಡ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲ್ಲ ಉಪೇಕ್ಷೆ ಮಾಡ್ತಾರೆ. ಅವರು ಸರಿಯಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷಕ್ಕೆ ಅವರ ಘನತೆಗೆ ಕುಂದು ಬರುತ್ತೆ ಎಂದರು.