ಮೈಸೂರು : ಕೌರವ ಸಂಸ್ಕೃತಿ ರಾಜಕಾರಣ ಬೇಡ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಕುಮಾರಸ್ವಾಮಿ ಅವರು ಆರೋಪ ಸಾಬೀತು ಮಾಡ್ತಾರಾ?ಕುಮಾರಸ್ವಾಮಿ ಅವರು ಡೆಸ್ಪರೇಟ್ ಆಗಿದ್ದಾರೆ.ಅವರಿಗೆ ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಅಸೂಯೆ, ದ್ವೇಷ.ಅವರು ಕೇವಲ ೧೯ ಸ್ಥಾನ ಗೆದ್ದರು.
ಅವರ ಪಂಚರತ್ನಗಳು ಏನಾದವು?೩೭ ರಿಂದ 19 ಕ್ಕೆ ಕುಸಿತ ಕಂಡಿದ್ದರಿಂದ ಹತಾಶೆಗೊಳಗಾದರು.
ಕುಮಾರಸ್ಚಾಮಿ ಹೇಳಿದ್ದಕ್ಕೆ ಉತ್ತರ ಕೊಡಬೇಕಿಲ್ಲ.
ಪೆನ್ ಡ್ರೈವ್ ವಿಚಾರದಲ್ಲಿತೆಗೆದು ತೋರಿಸಲು ಹೇಳಿ.
ಅಸೆಂಬ್ಲಿಯಲ್ಲಿ ಯಾಕೆ ಅವರು ತೋರಿಸಲಿಲ್ಲ.
ಸಾಕಷ್ಟು ಮಂದಿ ರಿಕ್ವೆಸ್ಡ್ ಮಾಡಿದ್ದಾರೆ ಅದಕ್ಕೆ ತೋರಿಸಲಿಲ್ಲ ಅಂತಾರೆ.ಇವರು ಎಂತಹವರು ?
ಅಣ್ಣಾ ಅಂದುಬಿಟ್ರಾ?ಅಣ್ಣಾ ಅಂದವರು ಯಾರು ?
ಅವರ ಹೆಸರು ಹೇಳಬೇಕಲ್ವ ?
ಅದಕ್ಕೆ ತೋರಿಸಲಿಲ್ವಾ ಎಂದು ವ್ಯಂಗ್ಯವಾಡಿದರು.
ಬೇಡ ಕಣಣ್ಣಾ.. ಬೇಡ ಕಣಣ್ಣಾ ಎಂದವರು ಯಾರು?
ಇವೆಲ್ಲವನ್ನೂ ಅವರು ಹೇಳಬೇಕಲ್ವಾ?
ವಿದ್ಯುತ್ ಕದ್ದವರು ಅವರ ಬಗ್ಗೆ ಏನ್ ಪ್ರಶ್ನೆ ಕೇಳ್ತೀರಿ.?
ಅವರಿಗೆ ಯಾವ ನೈತಿಕತೆವಿದೆ.
ಅವರಿಗೆ ಮಾತನಾಡಲು ಯಾವ ಹಕ್ಕಿದೆ.
ದಂಡ ಕಟ್ಟಿರುವುದೇ ಅಪರಾಧ ಮಾಡಿದ್ದೇನೆ ಅಂತಲೇ.
ಅಪರಾಧ ಅಂದರೆ ಅಪರಾಧವೇ
ಅದು ಸಣ್ಣದೇ ಆಗಲಿ, ದೊಡ್ಡದೇ ಆಗಲಿ ಎಂದರು
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತೆ ಎಂಬ ಬಿಎಸ್ ವೈ ಹೇಳಿಕೆ ಉತ್ತರಿಸಿದ ಸಿಎಂ, ಜನರು ತೀರ್ಮಾನ ನೀಡುತ್ತಾರೆ.ಬಿಜೆಪಿಯವರು ಕನಸು ಕಾಣ್ತಾ ಇದ್ದಾರೆ.
ರಮೇಶ, ಯತ್ನಾಳ್ , ಬೆಲ್ಲದ್ ಏಕೆ ಎದ್ದು ಹೋದರು?
ಮಗನನ್ನು ರಾಜ್ಯಾಧ್ಯಕ್ಷ ಮಾಡಿದ್ದು, ಅಶೋಕನನ್ನು ವಿಪಕ್ಷ ನಾಯಕನನ್ನಾಗಿ ಮಾಡಿದ್ದು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲಿದೆ.
ಬಿಜೆಪಿಯ ಪರಿಸ್ಥಿತಿ ಏನಾಗಲಿದೆ ಎಂಬುದನ್ನು ಕಾದುನೋಡಿ. ಸ್ವಲ್ಪದಿನ ಕಾದು ನೋಡಿ ಎನ್ನುತ್ತ ನಕ್ಕು ಮುಂದೆ ಸಾಗಿದರು.