ಬೆಂಗಳೂರು : ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬಳಿಕ ಮೌನಕ್ಕೆ ಶರಣಾಗಿದ್ದ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ರೆಬೆಲ್ ಆಗಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಕೇಂದ್ರದ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ದುಷ್ಯಂತ್ ಗೌತಮ್ ಕುಮಾರ್ ಅವರು ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿವಾಸಕ್ಕೆ ತೆರಳಿ ಮಾತನಾಡಿದರು.
ನಾಯಕರು ತೆರಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತ್ನಾಳ್, ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು. ಚೇಲಾಗಳ ಮಾತು ಕೇಳಿ ಕ್ರಮ ತೆಗೆದುಕೊಳ್ಳಬಾರದು. ನಾನು ಯಾವುದೇ ಹಲ್ಕ ಕೆಲಸ ಮಾಡಿಲ್ಲ. ನನಗೆ ಯಾರ ಭಯ ಇಲ್ಲ. ನಾನು ಯಾವತ್ತೂ ಸತ್ಯದ ಪರ ಇದ್ದೇನೆ ಎಂದು ಹೇಳಿದರು
ಹಿರಿಯ ನಾಯಕರಿಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ನಾನು ತಿಳಿಸಿದ್ದೇನೆ. ಈ ವಿಷಯಗಳನ್ನು ತಿಳಿಸಿದ್ದಕ್ಕೆ ವೀಕ್ಷಕರಿಗೆ ಸಂತೋಷ ಆಯ್ತು. ನಾನು ಹೇಳಿದ ವಿಚಾರಗಳನ್ನು ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂಬುದಾಗಿ ತಿಳಿಸಿದರು ಎಂದು ತಿಳಿಸಿದರು
ಬೆಂಗಳೂರಿನಲ್ಲಿ ನನ್ನ ಮನೆ ಸ್ಲಮ್‌ನಲ್ಲಿದೆ. ನಿಮ್ಮನ್ನು ನಾನು ಮನೆಗೆ ಕರೆಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಬೆಂಗಳೂರಿನಲ್ಲಿ ಯಾರು ಏನು ಮಾಡಿದ್ದಾರೆ? ಎಷ್ಟು ದೊಡ್ಡ ಮನೆಗಳನ್ನು ಕಟ್ಟಿಸಿದ್ದಾರೆ ಎಲ್ಲವನ್ನು ವೀಕ್ಷಕರಿಗೆ ವಿವರಿಸಿದ್ದೇನೆ ಎಂದರು
ವಿರೋಧ ಪಕ್ಷದ ನಾಯಕನ್ನಾಗಿ ಮಾಡಬೇಕು. ಪಕ್ಷದ ಅಧ್ಯಕ್ಷನನ್ನಾಗಿ ಮಾಡಬೇಕು ಎಂದು ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನಾನು ಬ್ಲ್ಯಾಕ್‌ಮೇಲ್ ಮಾಡುವ ವ್ಯಕ್ತಿಯಲ್ಲ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ನಾವು ಕೆಲಸ ಮಾಡುತ್ತೇವೆ. ನಮ್ಮ ದೇಶ ಉಳಿಯಬೇಕಾದರೆ ಮೋದಿ ಪ್ರಧಾನಿಯಾಗಬೇಕು.