ಚಾಮರಾಜನಗರ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮೌನವಾಗಿರುವ ಸಂಸದರ ಆಯ್ಕೆ ಮಾಡಿದ ತಪ್ಪಿಗೆ ಬಾರ್ ಕೋಲ್ ನಿಂದ ಹೊಡೆದುಕೊಂಡ ಕನ್ನಡ ಚಳವಳಿಗಾರರು ವಿನೂತನ ಪ್ರತಿಭಟನೆ ನಡೆಸಿದರು.
ಚಾಮರಾಜನಗರದಲ್ಲಿ ಭಾನುವಾರ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಶ್ರೀ ಭುವನೇಶ್ವರಿ ವೃತ್ತದಲ್ಲಿ ಸಮಾಯಿಸಿ ರಸ್ತೆತಡೆ ನಡೆಸಿದ್ದಲ್ಲದೆ ಕೈಯಲ್ಲಿ ಬಾರ್ ಕೋಲ್ ಹಿಡಿದು ಕೊಂಡು ಕೇಂದ್ರ, ತಮಿಳುನಾಡು ಹಾಗೂ ಮೌನವಾಗಿರುವ ರಾಜ್ಯದ ಸಂಸದರ ವಿರುದ್ದ ಕಿಡಿಕಾರಿ ತಮಗೆ ತಾವೇ ಬಾರ್ ಕೋಲ್ ನಿಂದ ಹೊಡೆದುಕೊಳ್ಳುವ ಮೂಲಕ ಪ್ರತಿಭಟನೆಯ 54ನೇ ದಿನ ಆಚರಿಸಿದರು.
ರಾಜ್ಯದ ಜನತೆಯ ಮತಗಳಿಂದ ಆಯ್ಕೆಯಾದ ಸಂಸದರಿಗೆ ಕಾವೇರಿ ನೀರಿನಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕಯ.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ ಶ್ರೀನಿವಾಸಗೌಡ, ಚಳವಳಿಗಾರರಾದ ಶಾ.ಮುರಳಿ, ರಾಜ್ ಗೋಪಾಲ್, ನಿಜದ್ವನಿ ಗೋವಿಂದರಾಜು, ಮಹೇಶ್ ಗೌಡ ಹಾಗೂ ಇನ್ನಿತರರು ಭಾಗಿಯಾಗಿದ್ದರು.