ಮೈಸೂರು : ನಗರದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾನಿಲಯದ ಆಲೈಡ್ ಹೆಲ್ತ್‌ಸೈನ್ಸ್ ವಿದ್ಯಾರ್ಥಿಗಳ ಪದವೀಧರರ ದಿನಾಚರಣೆಯನ್ನು ಅ.೩೧ರ ಸಂಜೆ ಕಾಲೇಜಿನ ರಾಜೇಂದ್ರ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಈ ಕುರಿತು ಇಂದು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾನಿಲಯದ ಪ್ರಾಂಶುಪಾಲ ಡಾ.ಎಚ್.ಬಸವನ ಗೌಡಪ್ಪ ಅವರು, ೧೩ ಬಿಎಸ್ಸಿ, ೯ ಎಂಎಸ್ಸಿ ಪದವಿ ಕೋರ್ಸ್ ಹಾಗೂ ಮಾಸ್ಟರ್ ಹೆಲ್ತ್ ಪದವಿ ಕೋರ್ಸ್‌ನ ೩೧೩ ವಿದ್ಯಾರ್ಥಿಗಳು ಅಂದು ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ೨೦ ಮಂದಿ ಚಿನ್ನದ ಪದಕ ಪಡೆದಿದ್ದು, ಪದಕ ಸ್ವೀಕರಿಸುವರು ಎಂದರು.
ಅಂದಿನ ಕಾರ್ಯಕ್ರಮವನ್ನು ವಿಜ್ಞಾನಿ ಡಾ.ಸುಚೇತಾ ಬ್ಯಾನರ್ಜಿ ಕುರುಂದ್ಕರ್ ಅವರು ಪದವಿ ಪ್ರಧಾನ ಮಾಡಲಿದ್ದು, ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಕಲಾಧಿಪತಿ ಡಾ.ಬಿ.ಸುರೇಶ್, ಸಂಶೋಧನಾ ಅಕಾಡೆಮಿ ಉಪಕುಲಾಧಿಪತಿ ಡಾ.ಸುರೀಂದರ್ ಸಿಂಗ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಬಿ.ಎಲ್.ಸುಜಾತಾ ರಾಥೋಡ್ ಅಧ್ಯಕ್ಷತೆ ವಹಿಸುವರು.