ಮೈಸೂರು : ಕಾಡಂಚಿನ ಭಾಗದಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರೆದಿದೆ.
ಕಾಡಾನೆ ತುಳಿತಕ್ಕೆ ಹಾಡಿ ನಿವಾಸಿ ಬಲಿಯಾಗಿರುವ ಘಟನೆ
ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಎಚ್ ಡಿ ಕೋಟೆ ತಾಲ್ಲೂಕು ಮಾಸ್ತಿ ಗುಡಿಯಲ್ಲಿ ನಡೆದಿದೆ.
ಪುನರ್ವಸತಿ ಕೇಂದ್ರದ ನಿವಾಸಿ ವಸಂತ (36) ಸಾವಿಗೀಡಗಿರುವ ದುರ್ದೈವಿ. ಮುಂಜಾನೆ ಜೋಳದ ಹೊಲದಲ್ಲಿ ಬರ್ಹಿದೆಸೆಗೆ ತೆರಳಿದ ವೇಳೆ ಕಾಡಾನೆ ದಾಳಿ ಮಾಡಿ ಸಾಯಿಸಿದೆ.ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ