ಮೈಸೂರು : ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ರಾಜ್ಯ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು
ನಗರದ ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಟೇಪ್ ಕಟ್ ಮಾಡುವ ಮೂಲಕ ಚಿತ್ರಕಲಾ ಸ್ಪರ್ಧೆ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಚಾಲನೆ ನೀಡಿದರು.
ಬಳಿಕ ಶಾಲಾ ಮಕ್ಕಳು ಚಿತ್ರ ಬಿಡುತ್ತಿರುವುದನ್ನ ವೀಕ್ಷಣೆ.
ಸ್ಥಳೀಯ ಶಾಸಕ ಕೆ.ಹರೀಶ್ ಗೌಡ, ತನ್ಬೀರ್ ಸೇಠ್, ಪರಿಷತ್ ಸದಸ್ಯ ಎಚ್.ವಿಶ್ವಾನಾಥ್ ರೊಡನೆ ಚಿತ್ರ ಕಲಾ ಸ್ಪರ್ಧೆ ವೀಕ್ಷಣೆ ಮಾಡಿದ ಉಸ್ತುವಾರಿ ಸಚಿವರು.
ಏಕ ಚಿತ್ತದಿಂದ ಬಗೆ ಬಗೆಯ ಚಿತ್ರಗಳ ಮೂಡಿಸುವುದರಲ್ಲಿ ಮಗ್ನರಾದ ಶಾಲಾ ಮಕ್ಕಳು.1 ರಿಂದ 10 ನೇ ತರಗತಿ ಶಾಲಾ ಮಕ್ಕಳಿಗೆ ಆಯೋಜನೆಗೊಂಡ ಸ್ಪರ್ಧೆ.
1 ರಿಂದ 4 ನೇ ತರಗತಿಗೆ ಒಂದು ವಿಭಾಗ, 5 ರಿಂದ 7 ನೇ ತರಗತಿ ಒಂದು ವಿಭಾಗ, 8 ರಿಂದ 10 ನೇ ತರಗತಿ ಎಂದು 3 ವಿಭಾಗ ಮಾಡಿ ಚಿತ್ರಕಲಾ ಸ್ಪರ್ಧೆ ಆಯೋಜನೆ.
ಚಿತ್ರ ಕಲಾ ಸ್ಪರ್ಧೆಯಲ್ಲಿ ನೂರಾರು ಶಾಲಾ ಮಕ್ಕಳು ಭಾಗಿ.
ಚಿತ್ರ ಬಿಡುತ್ತಿರುವ ಮಕ್ಕಳನ್ನು ಮಾತನಾಡಿಸಿ ಆತ್ಮವಿಶ್ವಾಸ ತುಂಬಿದ ಸಚಿವ ಮಹದೇವಪ್ಪ ಮತ್ತು ಶಾಸಕ ತನ್ವೀರ್ ಸೇಠ್.