ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದಲ್ಲಿ ದಸರಾ ಮಹೋತ್ಸವದ ನವರಾತ್ರಿಯ ಹಬ್ಬದ 9 ದಿನಗಳ ಕಾಲ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹದೇಶ್ವರಸ್ವಾಮಿಯ ಈ ದಿನ ಮೊದಲನೇ ದಿನದ ಉಯ್ಯಾಲೋತ್ಸವ ಸೇವೆ ನಡೆಯಿತು.
ಸಾಲೂರು ಮಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರಿಂದ ಪೂಜಾ ಕೈಂಕರ್ಯ ನೆರವೇರಿಸಿದರು.
ಈ ಸೇವೆಗೆ ದೊಡ್ಡ ಪಾಲಿನ ಮುಖ್ಯಸ್ಥರು ಹಾಗೂ ಅರ್ಚಕ ವೃಂದದವರು ಪುರಣಿ ಮಹೇಶ್. ದುಂಡ ತಂಬಡಿ. ಮದೇವ ತಂಬಡಿ, ಶಿವಮೂರ್ತಿ, ಮಾದೇಶ ಹಾಗೂ ಕಾರ್ಯದರ್ಶಿ ಸರಸ್ವತಿ, ಪ್ರಾಧಿಕಾರದ ನೌಕರರು, ಹಾಗೂ ಭಕ್ತರು ಭಾಗಿಯಾಗಿದ್ದರು.