ಚಾಮರಾಜನಗರ: ಕಾಡಿನಿಂದ ಬಂದ ಚಿರತೆ
ಗ್ರಾಮದೊಳಗೆ ಪ್ರವೇಶಿಸಿ ಮನೆ ಮುಂಭಾಗ ಕಟ್ಟಿಹಾಕಿದ್ದ ಎರಡು ಮೇಕೆಗಳನ್ನ ಚಿರತೆ ಕೊಂದುಹಾಕಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದ್ದು ಗ್ರಾಮದ ಜನತೆ ಆತಂಕಕ್ಕೊಳಗಾಗಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಲಕ್ಕೂರು ಗ್ರಾಮದ ಮಲ್ಲು ಎಂಬವರಿಗೆ ಸೇರಿದ ಮೇಕೆಗಳಾಗಿದ್ದು ರಾತ್ರಿ ವೇಳೆ ಮನೆ ಹೊರಗಡೆ ಕಟ್ಟಲಾಗಿದ್ದ ಸಂಧರ್ಭದಲ್ಲಿ ಗ್ರಾಮದೊಳಗೆ ಪ್ರವೇಶಿಸಿದ್ದ ಚಿರತೆ ಎರಡು ಮೇಕೆಗಳ ಮೇಲೂ ದಾಳಿ ನಡೆಸಿ ಕೊಂದು ಮುಗಿಸಿದೆ. ಇಷ್ಟು ದಿನ ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಳ್ತಿದ್ದ ಚಿರತೆ ಏಕಾಏಕಿ ಗ್ರಾಮದೊಳಗೆ ಪ್ರವೇಶ ಮಾಡಿರುವುದು ಜನರನ್ನ ಭಯಭೀತಿಗೊಳಿಸಿದ್ದು
ಮೇಕೆಗಳನ್ನ ಕಳೆದುಕೊಂಡ ರೈತ ಮಲ್ಲುವಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ತರು ಒತ್ತಾಯಿಸಿದ್ದಾರೆ.