ಮೈಸೂರು : ಹಿಂದೂ ಧರ್ಮದ ಧಾರ್ಮಿಕ ಪಾಠದ ಕೊರತೆಯಿಂದಾಗಿ ಹಿಂದೂ ಧರ್ಮದ ಅರಿವು ಹಿಂದೂಗಳಿಗೆ ಇಲ್ಲದಂತಾಗಿದೆ ಎಂದು ರಾಷ್ಟ್ರೀಯ ಬಜರಂಗದಳ ಸಹಸಂಯೋಜಕರಾದ ಸೂರ್ಯನಾರಾಯಣ ವಿಷಾಧ ವ್ಯಕ್ತಪಡಿಸಿದರು.
ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶೌರ್ಯ ಜಾಗರಣ ರಥಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಆನಾದಿಕಾಲದಿಂದಲೂ ಹಿಂದೂ ಸಮಾಜದ ಮೇಲೆ ನಿರಂತರ ದಾಳಿಗಾಳಾಗಿವೆ ನಮ್ಮ ಪೂರ್ವಜರ ದಿಟ್ಟ ಹೋರಾಟಗಳು, ತ್ಯಾಗ ಬಲಿದಾನಗಳಿಂದಾಗಿ ಹಿಂದೂ ಸಮಾಜ ಇನ್ನು ಉಳಿದುಕೊಂಡಿದೆ. ಹಿಂದೂ ಧರ್ಮದ ಮೇಲೆ ನಡೆದಿರುವ ಆಕ್ರಮಗಳು ಜಗತ್ತಿನ ಯಾವುದೇ ಧರ್ಮಗಳ ಮೇಲೆ ನಡೆದಿದ್ದರು ಇಂದಿಗೆ ಆ ಧರ್ಮವು ಉಳಿದುಕೊಳ್ಳುತ್ತಿರಲಿಲ್ಲ. ವಿಶ್ವದಲ್ಲೇ ಹಿಂದೂಗಳಿಗಾಗಿ ಇರುವುದು ಭಾರತ ಮಾತ್ರ ಆದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹಿಂದೂ ಸಮಾಜದ ಯುವ ಪೀಳಿಗೆ ದಾರಿತಪ್ಪುತ್ತಿರುವ ಮೂಲಕಾರಣ ಹಿಂದೂ ಧರ್ಮದ ಧಾರ್ಮಿಕ ಪಾಠದ ಕೊರತೆ, ದೇಶವನ್ನಾಳಿದ ನಾಯಕರು ಹಿಂದೂ ಧರ್ಮವನ್ನು ರಕ್ಷಿಸುವ ಬದಲು ಪಠ್ಯಪುಸ್ತಕಗಳಲ್ಲಿ ದಾಳಿಕೋರರ, ದೇಶದ್ರೋಹಿ ಪಠ್ಯವನ್ನು ವೈಭವಿಕರಿಸುವ ಮೂಲಕ ನೈಜ್ಯ ಇತಿಹಾಸವನ್ನು ತಿಳಿಸದೆ ಹಿಂದೂಗಳು ಅಂಜುಪುರುಕರು ಹಾಗೂ ಹಿಂದೂ ಧರ್ಮವು ಶೋಷಿಸುವ, ಮೌಢ್ಯಗಳಿಂದ ಕೂಡಿದ ಧರ್ಮ ಎಂಬಂತೆ ಬಿಂಬಿಸಲಾಗಿದೆ. ಇಷ್ಟಾದರು ಹಿಂದೂ ಸಮಾಜ ಜಾಗೃತಿಗೊಳ್ಳದೆ ಗಾಢ ನಿದ್ರೆಯಲ್ಲಿರುವುದು ವಿಪರ್ಯಸ. ಯುವ ಪೀಳಿಗೆ ತಮ್ಮ ಸ್ವಾರ್ಥ ಮನೋಭಾವನ್ನು ತೊರೆದು ಧರ್ಮ ಜಾಗೃತಿ ಹಾಗೂ ರಕ್ಷಣೆಯಲ್ಲಿ ತೊಡಗಿಕೊಳ್ಳ ಮೂಲಕ ಮುಂದಿನ ಪೀಳಿಗೆಗೆ ಹಿಂದೂ ಧರ್ಮವನ್ನು ಸಂರಕ್ಷಿಸಿ ಹಸ್ತಾಂತರಿಸಬೇಕಿದೆ ಎಂದರು.
ಹಿಂದೂ ಗುರುತಾಗಲೀ : ನಮ್ಮಲ್ಲಿ ಅನೇಕ ಜಾತಿ, ಪಂಗಡಗಳಿವೆ, ವಿಭಿನ್ನ ದೇವತೆಗಳನ್ನು ಆರಾಧಿಸುತ್ತವೇ ಅವುಗಳ ಆಚರಣೆಯ ಜೊತೆಗೆ ಸಾಮಾಜಿಕವಾಗಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಪರಿಕಲ್ಪನೆ ಮೂಡಬೇಕು. ಇಲ್ಲವಾದಲ್ಲಿ ನಮ್ಮನಾಳುವ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಜಾತಿಗಳನ್ನು ವಿಭಜಿಸುವ ಜೊತೆಗೆ ಧರ್ಮವನ್ನು ವಿಭಜಿಸಿ ಭಾರತ ರಾಷ್ಟ್ರದಲ್ಲೇ ಹಿಂದೂವನ್ನು ಅಲ್ಪಸಂಖ್ಯಾತರನ್ನಾಗಿಸುವ ಹುನ್ನಾರಗಳು ನಡೆಯುತ್ತಿದೆ ಎಂದು ತಿಳಿಸಿದರು.
ಮಂಡ್ಯ ಬಜರಂಗದಳದ ಜಿಲ್ಲಾಧ್ಯಕ್ಷ ಬಾಲು ಮಾತನಾಡಿ ಹಿಂದೂ ಸಮಾಜದ ಸೌಮ್ಯ ಗಣಗಳು ಇತರರಿಗೆ ವರವಾಗಿದೆ. ಧರ್ಮ ರಕ್ಷಣೆ ಸಮರಕ್ಕೂ ಸಿದ್ಧರಾಗುವ ಮನೋಭಾವನ್ನು ಹಿಂದೂ ಸಮಾಜ ಮೂಡಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಸಂಘಟಿತ ಹೋರಾಟದಿಂದ ಮಾತ್ರ ಧರ್ಮ ರಕ್ಷಣೆ ಸಾಧ್ಯವೆಂದು ತಿಳಿಸಿದರು.
ಬೈಕ್ ರ್ಯಾಲಿ : ಮೈಸೂರಿನಿಂದ ಹೊರಟ ರಥಯಾತ್ರೆಯನ್ನು ತಾಲೂಕಿನ ಬಿಳಿಕೆರೆಯಲ್ಲಿ ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮಿಗಳು ಹಾಗೂ ಹಿರಿಯ ನ್ಯಾಯವಾದಿ ವೇಣುಗೋಪಾಲ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ್ತಿಸಿದರು. ನಂತರ ನಗರದ ಅಂಜನೇಯಸ್ವಾಮಿ ದೇವಸ್ಥಾನದಿಂದ ಮುನೇಶ್ವರ ಕಾವಲ್ ಮೈದಾನದವರೆಗೆ ಬೈಕ್ ರ್ಯಾಲಿ ನಡೆಸಿದರು. ಈ ವೇಳೆ ಚಂಡೆ, ವೀರಗಾಸೆ ಕಲಾತಂಡಗಳು ಪಾಲ್ಗೊಂಡು ರಥಯಾತ್ರೆಯ ಮೆರಗು ಹೆಚ್ಚಿಸಿದರು. ನಾವೆಲ್ಲ ಹಿಂದೂ ನಾವೆಲ್ಲ ಒಂದು, ಜೈ ಶ್ರೀ ರಾಮ್ ಘೋಷಣೆಗಳು ರಥಯಾತ್ರೆಯ ಮೆರವಣಿಗೆಯಲ್ಲಿ ಕೇಳಿಬಂದವು
ಸಭೆಯಲ್ಲಿ ಶ್ರೀ ಮಾತಾ ಅಮೃತಾನಂದಾಮಹಿಮಠದ ಸ್ವರೂಪನಂದ ಸ್ವಾಮಿ, ಗಾವಡಗೆರೆಯ ಶ್ರೀಗುರುಲಿಂಗ ಜಮಗಮದೇವರ ಮಠದ ಶ್ರೀ ನಟರಾಜಸ್ವಾಮಿಗಳು ಆರ್ಶಿವಚನ ನೀಡಿದರು.
ವೇದಿಕೆಯಲ್ಲಿ ಮಾತಾ ಅಮೃತಾನಂದ ಅಸ್ಪತ್ರೆಯ ವೈದ್ಯರಾದ ಡಾ.ಮೋದಿ, ವಿಶ್ವ ಹಿಂದೂ ಪರಿಷದ್ ಗ್ರಾಮಾಂತರ ಉಪಾಧ್ಯಕ್ಷ ವಿ.ಎನ್ ದಾಸ್ ಉಪಸ್ಥಿತರಿದ್ದರು.