ಮೈಸೂರು : ರಾಜ್ಯದಲ್ಲಿರುವುದು ಜಿಹಾದಿ ಮನಸ್ಥಿತಿಯ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ದ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮೈಸೂರಿನಲ್ಲಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ.ರಾಜ್ಯದಾದ್ಯಂತ ಸಾವಿರಾರು ಗಣೇಶೋತ್ಸವಗಳು ನಡೆದಿವೆ.ಆದರೆ ಎಲ್ಲಿಯೂ ಗಲಾಟೆಗಳಾಗಿಲ್ಲ.ಆದರೆ ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆವರಣಿಗೆ ವೇಳೆ ತಲವಾರ್ ಪ್ರದರ್ಶಿಸಿದ್ದಾರೆ.
ಅವರೇ ಗಲಾಟೆ ಆರಂಭಿಸಿ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
ಇದು ಪೂರ್ವನಿಯೋಜಿತ ಕೃತ್ಯ.
ಆದರೂ ಕಾನೂನು ಕ್ರಮ ಜರುಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಸಾವಿರಾರು ಹಿಂದೂಗಳ ಹತ್ಯೆ ಮಾಡಿದ ಔರಂಗಜೇಬನನ್ನು ಮೆರೆಸಲಾಗುತ್ತಿದೆ.
ಶಿವಮೊಗ್ಗ ಗಲಭೆ ಪ್ರಕರಣ ಕುರಿತು ಸಿಬಿಐ ತನಿಖೆಯಾಗಬೇಕು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಯಾಗಬೇಕು.
ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು