ಚಾಮರಾಜನಗರ : ಕನ್ನಡ ಮೇರು ನಟ ದಿ. ಡಾ.ರಾಜ್ ಕುಮಾರ್ ರವರ ಸುಪುತ್ರ ಹಾಗೂ ಮೊಮ್ಮಗ ಪವಾಡ ಪುರುಷ ಮಲೆ ಮಹದೇಶ್ವರಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.
ಡಾ.ರಾಜ್ ಕುಮಾರ್ ರವರ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ , ಕಿರಿಯ ಪುತ್ರ ಯುವ ರಾಜಕುಮಾರ್, ಪತ್ನಿ ಮಂಗಳಾ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪವಾಡ ಪುರುಷ ಮಲೆಮಹದೇಶ್ವರ ಸ್ವಾಮಿ ದರ್ಶನವನ್ನು ಪಡೆದರು.
ಕುಟುಂಬ ಸಮೇತರಾಗಿ ಆಗಮಿಸಿದ್ದ ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು ಸಾಮಾನ್ಯ ಭಕ್ತರಂತೆ ದೇವರ ದರ್ಶನ ಪಡೆದ್ದಲ್ಲದೆ, ದಾಸೋಹ ಭವನಕ್ಕೆ ತೆರಳಿ ಪ್ರಸಾದ್ ಸೇವಿಸಿದರು.
ನಂತರ ಮಾತನಾಡಿದ ನಟ ರಾಘವೇಂದ್ರ ರಾಜ್ ಕುಮಾರ್, ತಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು.ಆ ಮೇಲೆ ಇಲ್ಲಿಗೆ ಬಂದಿರಲಿಲ್ಲ ಎಂದು ಹೇಳಿ, ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ , ಚಿತ್ರೀಕರಣದ ನಡುವೆ ಮಹದೇಶ್ವರ ದರ್ಶನ ಪಡೆದಿರುವುದಾಗಿ ಹೇಳಿದರು.
ಪವಾಡ ಪುರುಷ ಮಲೆ ಮಹದೇಶ್ವರ ನೆಲೆಸಿರುವ ಮಹದೇಶ್ವರ ಬೆಟ್ಟ ನೈಸರ್ಗಿಕವಾಗಿದ್ದು, ಸ್ವರ್ಗದಂತೆ ಕಾಣುತ್ತಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.
ಸಮಯ ಸಿಕ್ಕಾಗೆಲ್ಲಾ ಮಹದೇಶ್ವರ ದರ್ಶನ ಪಡೆಯಲು ಬರುವುದಾಗಿ ರಾಘವೇಂದ್ರ ರಾಜಕುಮಾರ್ ಹೇಳಿದರು.