ಮೈಸೂರು : ಸ್ವಚ್ಚ ಭಾರತ ಮಿಷನ್ ಅಂದ್ರೆ ಇಲ್ಲಿ ಗೊತ್ತೇ ಇಲ್ಲ. ಸಿಎಂ ಸಿದ್ದರಾಮಯ್ಯ ತವರಲ್ಲಿ ಅಸ್ವಚ ಗ್ರಾಮ ಪಂಚಾಯಿತಿಯೊಂದು ಇರುವುದು ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರ ಕ್ಷೇತ್ರ ತಿ.ನರಸೀಪುರ ತಾಲೂಕಿನ ಕರೋಹಟ್ಟಿ ಗ್ರಾಮ ಪಂಚಾಯಿತಿ ಗಬ್ಬು ನಾರುತ್ತಿದೆ.
ಗ್ರಾಮಗಳ ಅಭಿವೃದ್ದಿಯಾದ್ರೆ ಮಾತ್ರ ದೇಶದ ಅಭಿವೃದ್ಧಿ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ಈಗಿನ ಪ್ರಧಾನಿ ಮೋದಿ ಸಹ ಸ್ವಚ್ಚ ಭಾರತ ಎಂಬ ಯೋಜನೆಯ ಅಡಿಯಲ್ಲಿ ಗ್ರಾಮ ನೈರ್ಮಲ್ಯ ಕಡೆಗೆ ಗಮನ ಹರಿಸುತ್ತಿದ್ದಾರೆ. ಆದರೆ ಕರೋಹಟ್ಟಿ ಗ್ರಾಮ ಪಂಚಾಯಿತಿ ಮಾತ್ರ ಇದಕ್ಕೆ ತದ್ವಿರುದ್ದವಾಗಿದೆ. ಈ ಗ್ರಾಮ ಪಂಚಾಯಿತಿಯಲ್ಲಿ ಹೇಳೋರು ಇಲ್ಲ ಕೇಳೋರು. ಮೋರಿ ಕ್ಲೀನ್ ಮಾಡಲು ಹೇಳಿ ಗ್ರಾಮಸ್ಥರು ಅರ್ಜಿ ಕೊಟ್ಟರು ಇಲ್ಲಿನ ಪಿಡಿಓ ಸಿಬ್ಬಂದಿ ಸ್ವಚತೆ ಕಾರ್ಯ ಮಾಡಿಸಿಲ್ಲ. ಅರ್ಜಿ ಕೊಟ್ಟು 3 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ . ಬೀದಿಯಲ್ಲಿ ದೀಪದ ಕಂಬವಿದ್ರೂ ಬೆಳಕಿಲ್ಲ ಎಂದು ಗ್ರಾಮದ ಯುವಕರು ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮದ ಬೀದಿ ಸ್ವಚ್ಚತೆ ಮಾಡೋದು ಒಂದು ಕಡೆಯಾದರೆ ಪಂಚಾಯಿತಿ ಕ್ಲೀನ್ ಮಾಡಿಸುವುದು ಸಹ ಇಲ್ಲಿನ ಅಧಿಕಾರಿಗಳಿಗೆ ಕಷ್ಟವಾಗಿದೆ. ಗ್ರಾಮ ಪಂಚಾಯಿತಿಯ ಒಳಾಂಗಣ ಸುತ್ತ ಗಿಡಗಳು ಬೆಳೆದು ಕೊಳೆತು ನಾರುತ್ತಿದೆ. ಪಂಚಾಯಿತಿಯ ಸ್ಥಿತಿಯೇ ಈಗಿರುವಾಗ ಇನ್ನೂ ಈ ಪಂಚಾಯಿತಿ ವ್ಯಾಪ್ತಿಯ ಊರುಗಳ ಪರಿಸ್ಥಿತಿ ಏನು ಎಂಬ ಅನುಮಾನ ಮೂಡಿದೆ. ಸ್ವಚ್ಚತೆ ಬಗ್ಗೆ ಪಿಡಿಓ ಗೆ ದೂರು ನೀಡಿದರು ಪಿಡಿಓ ಕೂಡ ಕ್ಯಾರೇ ಎನ್ನದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ
ಅಕ್ರಮದ ಗೂಡದ ಕರೋಹಟ್ಟಿ ಗ್ರಾಮ ಪಂಚಾಯಿತಿ !?
ಗ್ರಾಮಗಳ ಸ್ವಚ್ಚತೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಿಡಿಓ ಪಂಚಾಯಿತಿ ಸದಸ್ಯರ ಜೊತೆ ಸೇರಿ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಊರಿನ ಯುವಕ ದಿಲೀಪ್ ಆರೋಪ ಮಾಡಿದ್ದಾರೆ. ರಸ್ತೆ ಮಾಡುವುದಾಗಿ ಹೇಳಿ ಜೆಸಿಬಿಯಲ್ಲಿ ಮಣ್ಣು ಚೆಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿಕೊಂಡಿದ್ದಾರೆ. ಮೋರಿ ಮಾಡಿರುವುದಾಗಿ ಬೋರ್ಡ್ ಹಾಕಿದ್ದಾರೆ. ಅಲ್ಲಿ ಮೋರಿಯೆ ಇಲ್ಲ. ಕೇವಲ ಹಣ ಲೂಟಿ ಮಾಡುವುದರಲ್ಲಿ ಪಿಡಿಓ ನಿರತರಾಗಿದ್ದಾರೆ ಇವರಿಗೆ ಪಂಚಾಯತ್ ನ ಕೆಲ ಸದಸ್ಯರು ಸಾಥ್ ನೀಡಿದ್ದಾರೆ. ಈ ಕಾಮಗಾರಿಗಳ ಕುರಿತು ಮಾಹಿತಿ ನೀಡುವಂತೆ ಆರ್.ಟಿ.ಐ ಅರ್ಜಿ ಹಾಕಿದರು ಸಂಭಂದಪಟ್ಟ ಪಂಚಾಯತ್ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಬನ್ನಿ ಕುಳಿತು ಮಾತನಾಡುವ ಎಂದು ಹೇಳುತ್ತಾರೆ ಮಾಹಿತಿ ಕೊಟ್ಟರೆ ಇವರ ನಿಜಬಣ್ಣ ಬಯಲಾಗುತ್ತದೆ ಎಂದು ಕರೋಹಟ್ಟಿ ಗ್ರಾಮದ ದಿಲೀಪ್ ಆರೋಪ ಮಾಡಿದ್ದಾರೆ
ಇನ್ನಾದರೂ ಗ್ರಾಮ ಪಂಚಾಯಿತಿಗಳಿಗೆ ಇಓ ಗಳು ಭೇಟಿ ನೀಡಿ ಪಿಡಿಒಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಇಲ್ಲವಾ ಎಂದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸ್ವಾತಂತ್ಯ ಬಂದು 76 ವರ್ಷ ಕಳೆದರೂ ಗ್ರಾಮಗಳಲ್ಲಿ ಇನ್ನೂ ಮೂಲಭೂತ ಸೌಕರ್ಯ ಸಿಗದಿರುವುದನ್ನು ಆಡಳಿತ ವೈಫಲ ಅನ್ನಬೇಕೋ ಅಧಿಕಾರಿಗಳ ನಿರ್ಲಕ್ಷ ಎನ್ನಬೇಕೋ ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಒಟ್ಟಾರೆಯಾಗಿ ಸಿಎಂ ತವರು ಕ್ಷೇತ್ರದಲ್ಲಿ ಇಂತಹ ಜಡ ಅಧಿಕಾರಿಗಳಿದ್ದು, ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ.