ಮೈಸೂರು : ನಾಳೆ ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಹಿನ್ನೆಲೆ, ಮೈಸೂರು ತಮಿಳು ಸಂಘಟನೆಗಳ ಒಕ್ಕೂಟದಿಂದ ಬಂದ್ ಗೆ ಬೆಂಬಲ ನೀಡಲಾಗಿವುದು ಎಂದು ಅಧ್ಯಕ್ಷ ರಘುಪತಿ ತಿಳಿಸಿದ್ದಾರೆ.
ನಾವು ಕನ್ನಡ ನಾಡಿನ ನೆಲ ಜಲದ ವಿಚಾರವಾಗಿ ಸದಾ ಅವರ ಜೊತೆಯಿದ್ದೇವೆ. ನಮ್ಮ ಬಳಿ ನೀರು ಇದ್ದಾಗ ನಾವು ನೀರು ಕೊಟ್ಟಿದ್ದೇವೆಈಗ ನಮ್ಮ ಬಳಿಯೇ ನೀರು ಇಲ್ಲ ಈ ಪರಿಸ್ಥಿತಿಯಲ್ಲಿ ನೀರು ಕೊಡಲು ಸಾಧ್ಯವಿಲ್ಲ
ಇದನ್ನು ತಮಿಳುನಾಡಿನಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ನಾವು ಹಿಂದಿನಿಂದಲೂ ಸದಾ ಕರ್ನಾಟಕದ ಪರ ಇರುತ್ತೇವೆ. ಬರಗಾಲ ಬಂದಾಗ ಈ ರೀತಿ ಪರಿಸ್ಥಿತಿ ಬರುತ್ತದೆ.ಇದಕ್ಕೆ ಶಾಶ್ವತವಾದ ಪರಿಹಾರ ಸರ್ಕಾರ ಕಂಡುಕೊಳ್ಳಬೇಕು. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳಬೇಕು ಎಂದು ತಮಿಳು ಸಂಘದ ಅಧ್ಯಕ್ಷ ರಘುಪತಿ ಮನವಿ ಮಾಡಿದರು