ಮೈಸೂರು : ಮತ್ತೇ ತಮಿಳುನಾಡಿಗೆ ಕಾವೇರಿ ನೀರು ಬಿಡೋ ಆದೇಶ ವಿಚಾರಕ್ಕೆ
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕಾರಣ ಮಾಡುತ್ತಿದ್ದಾರೆ.ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಸಿಡ್ಲ್ಯೂಆರ್ ಸಿ ಮುಂದಿನ 18 ದಿನ ಪ್ರತಿ ದಿನ 3 ಸಾವಿರ ಕ್ಯೂಸೆಕ್ ಬಿಡಲು ಸೂಚಿಸಿದೆ.
ಈ ಬಗ್ಗೆ ಇನ್ನೂ ಕಾನೂನು ತಜ್ಞರ ಜೊತೆ ಚರ್ಚೆ ಮಾಡಬೇಕಿದೆ.ಚರ್ಚೆ ಬಳಿಕ ಸರ್ಕಾರದ ನಿರ್ಧಾರ ತಿಳುಸುತ್ತೇವೆ ಎಂದರು.
ನಮಗೆ ಇನ್ನೂ ಸೆ.27 ರ ವರೆಗೆ ಕಾಲವಕಾಶವಿದೆ.
ಸಿಡ್ಲ್ಯೂಸಿ ಆದೇಶ ಇರೋದು ಸೆ.28 ರಿಂದ 18 ದಿನ.
ಹೀಗಾಗಿ ನಮ್ಮ ತೀರ್ಮಾನ ತೆಗೆದುಕೊಳ್ಳಲು ಇನ್ನೂ ಸಮಯ ಇದೆ ಸಿಎಂ ಸಿದ್ದರಾಮಯ್ಯ ಹೇಳಿದರು