ಚಾಮರಾಜನಗರ : ಕರ್ನಾಟಕ ಕಾವಲು ಪಡೆಯವತಿಯಿಂದ ಕಾವೇರಿ ಕಿಚ್ಚು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಕಾವೇರಿನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು .
ಈ ಹೋರಾಟದಲ್ಲಿ ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ರಾಜ್ಯ ಸಾರಿಗೆ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆದು ಕೇಂದ್ರ ಸರ್ಕಾರ, ಕಾವೇರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿದ ಕಾವಲು ಪಡೆಯ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ, ಕಾವೇರಿ ಪ್ರಾಧಿಕಾರ ಹಾಗೂ ರಾಜ್ಯ ಸಂಸದರು ಧ್ವನಿ ಎತ್ತದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈದೇ ವೇಳೆ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಮಾಡ್ರಹಳ್ಳಿ ಸುಭಾಷ್ ಕಾವೇರಿ ವಿಚಾರವಾಗಿ ಹಲವು ಮಾಹಿತಿಯನ್ನು ತಿಳಿಸಿದರು,
ದಲಿತ ಸಾಹಿತ್ಯ ಪರಿಷತ್ತಿನ ತಾ.ಅಧ್ಯಕ್ಷರಾದ ಯೋಗೇಶ್ ಮಾತನಾಡಿ ಕಾವೇರಿ ನೀರಿನ ಒಪ್ಪಂದ ಬಗ್ಗೆ ಹಲವು ವಿಚಾರ ತಿಳಿಸಿದರು
ಈ ಸಂದರ್ಭದಲ್ಲಿ ಕಾವಲು ಪಡೆಯ ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಶೀದ್. ತಾ. ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡರು.ತಾ. ಉಪಾಧ್ಯಕ್ಷರಾದ ಮಂಜುನಾಥ್.ತಾ ಕಾರ್ಯಧ್ಯಕ್ಷರಾದ ಈಗಲ್ ಸ್ವಾಮಿ. ತಾ!ಕಾರ್ಯದರ್ಶಿಗಳಾದ ಎಸ್.ಮುಬಾರಕ್.ತಾ ಸಂಚಾಲಕರಾದ ಕುಂಜುಟ್ಟಿ.ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷ.ಟೌನ್ ಗೌರವಾಧ್ಯಕ್ಷರಾದ ಶಕೀಲ್. ಕಸಬಾ ಹೋಬಳಿ ಘಟಕದ ಅಧ್ಯಕ್ಷರಾದ ಹೆಚ್.ರಾಜು.ಟೌನ್ ಸಂಚಾಲಕರಾದ ಮಿಮಿಕ್ರಿರಾಜು.ಸುರೇಶ್. ಡ್ಯಾನ್ಸರ್ ಪವನ್. ಮಹದೇವನಾಯ್ಕ. ಒಣಕಾರ್ನಾಯ್ಕರು.ಸೇರಿದಂತೆ ರಾಮೇಗೌಡ. ಬಸವೇಗೌಡ.ಅಬ್ದುಲ್ ಜಬ್ಬಾರ್. ಅಬ್ದುಲ್ ಲರಾಜಿಕ್.ಶಂಕರ. ರಾಜೇಶ್ ಕಡ್ಡಿಪುಡಿ.ಗಣೇಶ್ ಕೂತನೂರು.ಹಾಗೂ ಸಾರ್ವಜನಿಕರು ಹಾಜರಿದ್ದರು