– ನಂಜನಗೂಡಿನಲ್ಲೂ ಕಾವೇರಿದ ಕಪಿಲಾ ಕಿಚ್ಚು
– ಕಪಿಲಾ ನದಿ ಸೇತುವೆ ಮೇಲೆ ಮಲಗಿಕೊಂಡು ರೈತರ ಬೃಹತ್ ಪ್ರತಿಭಟನೆ
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ
ಮೈಸೂರು : ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ಖಂಡಿಸಿ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಮತ್ತು ರಾಂಪುರ ಕಪಿಲಾ ನದಿ ಸೇತುವೆಯನ್ನು ಬಂದ್ ಮಾಡಿ ಸೇತುವೆ ಮೇಲೆ ರೈತರು ಮಲಗಿ ಪ್ರತಿಭಟನೆ ನಡೆಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ರಾಂಪುರ ಮತ್ತು ಹುಲ್ಲಹಳ್ಳಿ ಕಪಿಲಾ ನದಿ ಸೇತುವೆಯ ಮೇಲೆ ಮಲಗಿಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ, ಮತ್ತು ರಾಜ್ಯ ಸಂಸದರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಪ್ರಾಧಿಕಾರ ಕನ್ನಡದ ರೈತರಿಗೆ ವಿಷ ಕೊಡುವ ಕೆಲಸ ಮಾಡುತ್ತಿದೆ. ತಮಿಳುನಾಡಿಗೆ ನಮ್ಮ ರಕ್ತ ಮತ್ತು ನಮ್ಮ ಕಣ್ಣೀರನ್ನು ಕೊಡಬೇಕು ಇವೆರಡೇ ನಮ್ಮಲ್ಲಿರುವುದು. ರಾಜ್ಯದಲ್ಲಿ ಕಡಿಮೆ ಮಳೆ ಬಿದ್ದಿದೆ. ಇಂತಹ ಸಂದರ್ಭದಲ್ಲೂ ತಮಿಳುನಾಡಿಗೆ ಪದೇಪದೇ ನೀರು ಬಿಡಿ ಎಂದರೆ, ಇದು ಕನ್ನಡದ ರೈತರಿಗೆ ಮಾಡಿದ ದ್ರೋಹ.
28 ಸಂಸದರು ಪ್ರಧಾನ ಮಂತ್ರಿಗಳ ಬಳಿ ಕೇಳಬೇಕಿತ್ತು. ಆದರೆ ಕೇಳಿಲ್ಲ. ಈ ಕೂಡಲೇ ತಮಿಳುನಾಡಿಗೆ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ರೈತ ಸಂಘದ ಪದಾಧಿಕಾರಿಗಳು ಹಾಗೂ ಮಹಿಳೆಯರು ಭಾಗವಹಿಸಿದರು.