ಮೈಸೂರು : ಮೈಸೂರಿನಲ್ಲಿ ನಿಲ್ಲದ ಕಾವೇರಿ ಕಿಚ್ಚು.
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನಲೆ ನಾಳೆ ನರಸೀಪುರ ಬಂದ್ ಗೆ ಕಾವೇರಿ ಕಬಿನಿ ಹಿತರಕ್ಷಣ ಸಮಿತಿ ಕರೆ ಕೊಟ್ಟಿದೆ.
ನರಸೀಪುರ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಬಂದ್ ವಿಚಾರವಾಗಿ ಪೂರ್ವಭಾವಿ ಸಭೆ ನಡೆಸಿದವು.ಕಾವೇರಿ ಕಬಿನಿ ಹಿತರಕ್ಷಣ ಸಮಿತಿ, ರಾಜ್ಯ ರೈತ ಸಂಘ,ಕಬ್ಬು ಬೆಳೆಗಾರರ ಸಂಘ,ಕನ್ನಡಪರ ಸಂಘಟನೆ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಸಭೆಯಲ್ಲಿ ಭಾಗಿಯಾಗಿವೆ.
ನರಸೀಪುರ ಬಂದ್ ಯಶಸ್ವಿಗೆ ಒಕ್ಕೊರಲ ನಿರ್ಧಾರ ಮಾಡಿ
ಬಂದ್ ಗೆ ಸಾರ್ವಜನಿಕರು ಸಹಕಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ