ಚಾಮರಾಜನಗರದ : ಕಬ್ಬು ಬೆಳೆಗಾರರ ಸಂಘದಿಂದ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ ಘಟನೆ ಚಾಮರಾಜನಗರ ದಲ್ಲಿ ಶನಿವಾರ ನಡೆಯಿತು.
ಚಾಮರಾಜನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಜಮಾಯಿಸಿ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರಾದ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಸೀತಾರಂ,ಎಐಸಿಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ರಾಜ್ಯ ಸಭಾ ಸದಸ್ಯರ ಭಾವಚಿತ್ರ ಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ,
ಕಾವೇರಿ ಕಬಿನಿ ವಿಚಾರದಲ್ಲಿ ರಾಜ್ಯ ಸಭಾ ಸದಸ್ಯರುಗಳು ಚಕಾರವನ್ನು ಎತ್ತದೆ ಮೌನವಾಗಿದ್ದಾರೆ ಇವರು ರಾಜ್ಯದ ಕೋಟ ಅಡಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರು ಜೈರಾಮ್ ರಮೇಶ್ ಜಗ್ಗೇಶ್ ರಾಜೀವ್ ಚಂದ್ರಶೇಖರ್ ಕೇಂದ್ರ ಸಚಿವರು ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪ್ರಮುಖರಾದ ಇನ್ನು ಮುಂತಾದವರು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡದೆ ಪಂಚೇಂದ್ರಿಯಗಳಿಲ್ಲದ ಹಾಗೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಆದ್ದರಿಂದ ರಾಜ್ಯಕ್ಕೆ ತುಂಬಾ ಅನ್ಯಾಯವಾಗುತ್ತಿದೆ ಇವರು ತಕ್ಷಣ ಕರ್ನಾಟಕದಿಂದ ಆಯ್ಕೆಯಾಗಿರುವ ಸ್ಥಾನಗಳಿಗೆ ರಾಜೀನಾಮೆ ನೀಡಿ ಯಾರಿಗೆ ಗುಲಾಮರಾಗಿ ಮಾತನಾಡಿದ ಮೌನವಾಗಿದ್ದಾರೋ ಅಲ್ಲಿಯೇ ಆಯ್ಕೆಯನ್ನು ಇವರು ಬಯಸಲಿ ಅದನ್ನು ಬಿಟ್ಟು ಮೌನವಾಗಿರುವುದು ಸರಿಯಲ್ಲ ಆದ್ದರಿಂದ ಇವರನ್ನು ಕಾಣೆಯಾಗಿದ್ದಾರೆ ಎಂದು ಭಾವಿಸಬೇಕೆ ಎಂದು ಭಾಗ್ಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಶಿವಮೂರ್ತಿ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜ್ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್ ಮಹದೇವಸ್ವಾಮಿ ಗುರುಮಲ್ಲಪ್ಪ ಸುಧಾಕರ್ ಅರಳಿಕಟ್ಟೆ ಗ್ರಾಮ ಘಟಕದ ಅಧ್ಯಕ್ಷ ಕುಮಾರ್ ವೀರಭದ್ರಪ್ಪ ಮಹದೇವಸ್ವಾಮಿ ಕಿಳ್ಳಿಪುರ ಗ್ರಾಮ ಘಟಕದ ನಂದೀಶ್ ಶ್ರೀಕಂಠಪ್ಪ ಮುಂತಾದವರು ಹಾಜರಿದ್ದರು