ಚಾಮರಾಜನಗರ : ಅರಣ್ಯ ಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಆನೆ ದಾಳಿಗೆ ಸಿಲುಕಿ ವ್ಯಕ್ತಿ ಸಾವಿಗೀಡಗಿರುವ ಘಟನೆ ನಡೆದಿದೆ.
ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯುವಕನ ಶವ ಪತ್ತೆ.ಹನೂರು ತಾಲ್ಲೂಕು ಬೈಲೂರು ಅರಣ್ಯ ವಲಯದಲ್ಲಿ ಘಟನೆ. ಹನೂರು ತಾಲ್ಲೂಕಿನ ಬೊಂಬೆಗಲ್ಲು ಪೋಡು ಬಳಿ ಮೃತದೇಹ ಪತ್ತೆ.ಹನೂರು ತಾಲ್ಲೂಕು ಕಡಕಲಕಿಂಡಿ ಪೋಡು ನಿವಾಸಿ ನಾಗೇಶ್ (25) ಸಾವು.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕು ಆಸ್ಪತ್ರೆಗೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದಿದ್ದಾರೆ
ಮರಣೋತ್ತರ ಪರೀಕ್ಷೆ ಬಂದ ಬಳಿಕ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ