ಮೈಸೂರು : ಸಿಎಂ ಸಿದ್ದರಾಮಯ್ಯ ಆಯ್ಕೆಯನ್ನ ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಕುಕ್ಕರ್ ಇಸ್ತ್ರಿ ಪೆಟ್ಟಿಗೆ ಹಂಚಿ ಅಕ್ರಮವಾಗಿ ಗೆದ್ದಿದ್ದಾರೆ. ಕುಕ್ಕರ್ ಹಂಚಿದ್ದನ್ನು ಯತಿಂದ್ರ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಚುನಾವಣೆ ವ್ಯವಸ್ಥೆ ಸರಿಯಾಗಬೇಕು.ಚುನಾವಣೆಯಲ್ಲಿ ಹಣಕಾಸಿನ ಅವ್ಯವಹಾರ ನಿಲ್ಲಬೇಕು.ಕಾಂಗ್ರೆಸ್ ಅವ್ರು ಗ್ಯಾರೆಂಟಿ ಕಾರ್ಡ್ ಮೂಲಕ ಜನರನ್ನು ಮರಳು ಮಾಡಿದ್ರು
ಜನರಿಗೆ ಗ್ಯಾರೆಂಟಿ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ್ರು
ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಆಮಿಷ ಒಡ್ಡಬಾರದು ಎಂಬ ನಿಯಮವಿದೆ. ಸಂತೋಷ್ ಹೆಗ್ಡೆ ಕೂಡ ಕಾಂಗ್ರೆಸ್ ಗ್ಯಾರೆಂಟಿಯನ್ನು ಖಂಡಿಸಿದ್ರು. ಮುಖ್ಯಮಂತ್ರಿ ಮಗನೇ ಮಡಿವಾಳ ಸಭೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ
ಚುನಾವಣೆ ಆಯೋಗ ಈ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರ
ಬರದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ಈ ಬಾರಿ ಸರಳ ದಸರಾ ಮಾಡುತ್ತೇವೆ ಎಂದು ಹೇಳಿದ್ದಾರೆ.
ಎಷ್ಟು ಸರಳಾ,ಅದು ಅರಮನೆಗೆ ಮಾತ್ರ ಸೀಮಿತವಾಗುತ್ತಾ ಎನ್ನುವ ವಿಚಾರವನ್ನು ಆದಷ್ಟು ಬೇಕು ಸ್ಪಷ್ಟಪಡಿಸಬೇಕು.
ದಸರಾ ಅಂದರೆ ಸಾವಿರಾರು ಜನಕ್ಕೆ ಒಂದು ವರ್ಷದ ಕೂಳು ಸಿಗುತ್ತಿತ್ತು. ಸರಳ ದಸರಾ ಅಂತಿದ್ದ ಹಾಗೆ ಕರಿ ಛಾಯೆ ಜನರಲ್ಲಿ ಮೂಡುತ್ತೆ. ಪ್ರವಾಸಿಗರ ಆಗಮನ ಕೂಡ ಕಡಿಮೆಯಾಗುತ್ತದೆ. ಸರ್ಕಾರ ಎಷ್ಟರ ಮಟ್ಟಿಗೆ ಸರಳವಾಗಿ ಆಚರಣೆ ಮಾಡುತ್ತಾರೆ ಅನ್ನೋದು ಗೊತ್ತಿಲ್ಲ.
ಸಾಂಪ್ರದಾಯಿಕ ದಸರಾ ಆಚರಣೆ ಮಾಡಬೇಕು.
ಪ್ರವಾಸಿಗರು ಹೆಚ್ಚಿನ ರೀತಿಯಲ್ಲಿ ಬರುವ ಹಾಗೆ ಮಾಡಬೇಕು ಎಂದರು.
ಸರ್ಕಾರ ಒಂದು ಸ್ಪಷ್ಟ ನಿಲುವನ್ನ ಹೊರಡಿಸಬೇಕು.
ದಸರಾ ಆಚರಣೆ ಬಗ್ಗೆ ಬಗ್ಗೆ ಒಂದು ಸ್ಪಷ್ಟತೆ ನಿರ್ಧಾರಕ್ಕೆ ಸರ್ಕಾರ ಬರಬೇಕು. ದಸರಾ ಹಿನ್ನೆಲೆ ನಗರದಲ್ಲಿರುವ ರಸ್ತೆ ದುರಸ್ತಿಗಳಾದರೂ ಆಗುತ್ತಿದ್ದವು. ರಸ್ತೆ ದುರಸ್ತಿ ಬಗ್ಗೆ ಆತಂಕ ಇದೆ ಎಂದು ಶಾಸಕ ಶ್ರೀವತ್ಸ ಹೇಳಿದರು