ಮೈಸೂರು : ಚೈತ್ರಾ ಕುಂದಾಪುರ ವಂಚನೆ ವಿಚಾರದಲ್ಲಿ
ಮೈಸೂರು ನಿಯೋಗ ಸಿಎಂ ಭೇಟಿ ಮಾಡಲಿದೆ ಎಂದು
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ ಬಿ ಜೆ ವಿಜಯಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷ ತನಿಖಾ ಸಮಿತಿಯನ್ನು ನೇಮಕ ಮಾಡುವಂತೆ ಒತ್ತಾಯ ಮಾಡುತ್ತೇವೆ. ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆಗೆ ಮನವಿ ಮಾಡುತ್ತೇವೆ
ಚೈತ್ರಾ ಕುಂದಾಪುರ ಖುದ್ದು ಕ್ಲೂ ನೀಡಿದ್ದಾರೆ
ಅದರ ಆಧಾರದಲ್ಲಿ ಪೊಲೀಸ್ ತನಿಖೆಯಲ್ಲ ವಿಶೇಷ ತನಿಖಾ ಸಮಿತಿ ಮಾಡಬೇಕು. ಚೈತ್ರಾ ಕುಂದಾಪುರ ಹೇಳಿರುವ ಎಲ್ಲರನ್ನು ಬಂಧಿಸಬೇಕು. ಚಕ್ರವರ್ತಿ ಸೂಲಿಬೆಲೆ ಅರಗ ಜ್ಞಾನೇಂದ್ರರನ್ನು ಸೇರಿ ಎಲ್ಲರನ್ನೂ ಬಂಧಿಸಬೇಕು ಎಂದರು.
ಪಿಎಸ್‌ಐ ನೇಮಕಾತಿ ಹಗರಣ ಕುಲಪತಿ ನೇಮಕಾತಿ ಹಗರಣವನ್ನು ಇದರ ವ್ಯಾಪ್ತಿಗೆ ತರಬೇಕು
ರಾಜ್ಯದ ಎಲ್ಲಾ ಕುಲಪತಿಗಳ ನೇಮಕ ತನಿಖೆಯಾಗಬೇಕು
ಬಿಜೆಪಿ ಸರ್ಕಾರದ ಅವಧಿಯ ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿಯಲ್ಲೂ ಅವ್ಯವಹಾರವಾಗಿದೆ
ಅದನ್ನು ತನಿಖಾ ಸಮಿತಿಯು ವ್ಯಾಪ್ತಿಗೆ ತರಬೇಕು
ಇದರಿಂದ ದೊಡ್ಡ ಮಟ್ಟದ ಹಗರಣ ಬಯಲಿಗೆ ಬರಲಿದೆ
ನಾವು ಸಿಎಂ ಗೃಹ ಸಚಿವರುನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಲಿದ್ದೇವೆ
ರಾಜ್ಯದ ಕುಲಪತಿಗಳು ಬಿಜೆಪಿಗೆ ಸಾವಿರಾರು ಕೋಟಿ ಚುನಾವಣೆ ನಡೆಸಲು ಸಹಾಯ ಮಾಡಿದ್ದಾರೆ
ಚೈತ್ರಾ ಕುಂದಾಪುರ ಅವರ ಪ್ರಕರಣದಿಂದ ನಮಗೆ ಈ ವಿಚಾರ ಗೊತ್ತಾಗಿದೆ ಇನ್ನು ಒಂದು ವಾರದಲ್ಲಿ ಈ ಸತ್ಯ ಗೊತ್ತಾಗಲಿದೆ ಎಂದು ತಿಳಿಸಿದರು