ಮೈಸೂರು : ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ವಿಪಕ್ಷಗಳು ಎರಡು ರಾಜಕೀಯ ಮಾಡುತ್ತಿದೆ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಕಿಡಿಕಾರಿದರು.
ರಾಜ್ಯದ ಹಿತಕ್ಕಾಗಿ ಇಬ್ಬರು ಒಟ್ಟಿಗೆ ಹೋರಾಟ ಮಾಡುತ್ತಿಲ್ಲ
ಸರ್ಕಾರ ಹಾಗೂ ವಿಪಕ್ಷಗಳು ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಮಾತನಾಡುತ್ತಿದ್ದಾರೆ ರಾಜ್ಯದ ಹಿತ ದೃಷ್ಟಯಿಂದ ಒಳ್ಳೆಯ ಬೆಳವಣಿಗೆಯಲ್ಲ. ತುರ್ತು ಸಭೆ ಕರೆದಾಗ ವಿಪಕ್ಷದ ನಾಯಕರು ಹೋಗಲಿಲ್ಲಬಿಜೆಯವರು ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ
ಕಾಂಗ್ರೆಸ್ನವ್ರು ಪಾಳೇಗಾರಿಕೆ ಮಾಡುತ್ತಿದ್ದಾರೆ
ನೀರು ಬಿಡುವ ಇಂತ ಪಾಳೆಗಾರರನ್ನು ನಾನು ಹಿಂದೆ ನೋಡಿಲ್ಲನೀರು ಬೇಡಬೇಕಾಗತ್ತೆ ಬಿಡ್ತೀವಿ ಎಂದು ಡಿಕೆ ಶಿವಕುಮಾರ್ ಹೇಳ್ತಾರೆಇಂತಹ ಹೇಳಿಕೆಯಿಂದ ನನಗೆ ನೋವಾಗಿದೆ ಎಂದು ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದರು
ಬೆಂಗಳೂರು ಮೈಸೂರು ಮಂಡ್ಯದಲ್ಲಿರುವ ತಮಿಳರನ್ನು ವಾಪಸ್ ಕಳುಹಿಸಬೇಕಾಗುತ್ತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಗೆ ನೇರ ಎಚ್ಚರಿಕೆ ಕೊಟ್ಟ ವಾಟಾಳ್ ನಾಗರಾಜ್. ತಮಿಳರು ಇಲ್ಲಿ ಇರಬಾರದು ಇವ್ರಿಗೆ ಇಲ್ಲಿ ಎಲ್ಲಿಂದ ನೀರು ಕೊಡೋಣ
ತಮಿಳುನಾಡಿನ ರೈತರನ್ನು ಎತ್ತಿಕಟ್ಟಿದ್ದಿರಾ ಇದೆ 19 ನೇ ತಾರೀಖು ನಿಮ್ಮ ರೈತರು ಚಳುವಳಿಗೆ ಇಳಿಯುತ್ತಿದ್ದಾರೆ
ಸ್ಟಾಲಿನ್ ಅವ್ರೆ ಎಚ್ಚರ ಮುಂದಿನ ದಿನಗಳಲ್ಲಿ ತಮಿಳು ನಾಡು ಸರ್ಕಾರದ ವಿರುದ್ಧ ಸ್ಟಾಲಿನ್ ವಿರುದ್ಧ ಕರ್ನಾಟಕದ್ಯಾಂತ ಹೋರಾಟ ಮಾಡ್ಬೇಕಾಗತ್ತೆ,
ರಾಜ್ಯ ಬಂದ್ ಗೂ ಕರೆ ಕೊಡ್ತೀವಿ ತಮಿಳು ಗಡಿ ಬಂದ್ ಮಾಡ್ತೀವಿತಮಿಳು ಬಸ್ ತಮಿಳು ಚಿತ್ರ ಎಲ್ಲವನ್ನೂ ಬಂದ್ ಮಾಡ್ತೀವಿ ಎಂದು ಸ್ಟಾಲಿನ್ ಸರ್ಕಾರಕ್ಕೆ ನೇರ ಎಚ್ಚರಿಕೆ ಕೊಟ್ಟರು.
ಈ ಯಡಿಯೂರಪ್ಪ ತಮಿಳರಿಗೋಸ್ಕರ ತಿರುವಳ್ಳುವರ್ ಪ್ರತಿಮೆ ನಿರ್ಮಾಣ ಮಾಡಿದ್ರು
ಬೊಮ್ಮಾಯಿ ವಿಧಾನಸೌಧಕ್ಕೆ ಕನ್ನಡ ವಿರೋಧಿ ರಜನಿಕಾಂತ್ ಕರೆಸಿ ಸಮಾರಂಭ ಮಾಡಿದ್ರು
ಈಗ ರಜನಿಕಾಂತ್ ಗೆ ನಿಜವಾಗಲೂ ಎದೆಗಾರಿಕೆ ಇದ್ರೆ ಪ್ರಾಮಾಣಿಕತೆ ಇದ್ರೆ ಧೈರ್ಯ ಇದ್ರೆ ಸ್ಟಾಲಿನ್ ನಿರ್ಧಾರವನ್ನು ಖಂಡಿಸಬೇಕು
ಕಮಲ್ ಹಾಸನ್ ಕೂಡ ಈ ನಿರ್ಧಾರವನ್ನು ಖಂಡಿಸಬೇಕು
ಕರ್ನಾಟಕದ ಪರ ನಿಲ್ಲಬೇಕು
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಹೋರಾಟ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ