ಮೈಸೂರು : ಸರ್ಕಾರದ ಆದೇಶಕ್ಕೆ ಡೊಂಟ್ ಕೇರ್
ಮೂರು ಬಾರಿ ವರ್ಗಾವಣೆ ಆದ್ರೂ ಜಾಗ ಬಿಟ್ಟು ಕದಲದ ಖಾದರ್ ಪಾಷಾ.ರಾಜ್ಯ ಮುಕ್ತ ವಿವಿಯಲ್ಲಿ ಹಣಕಾಸು ಅಧಿಕಾರಿಯಾಗಿರುವ ಖಾದರ್ ಪಾಷಾ.ವರ್ಗಾವಣೆ ಮಾಡಿ ತಿಂಗಳು ಕಳೆದರೂ ಮುಕ್ತ ವಿವಿ ಬಿಟ್ಟು ಹೋಗದ ಅಧಿಕಾರಿ.
ಮುಕ್ತ ವಿವಿಯಿಂದ ಮಂಡ್ಯದ ಮೈ ಶುಗರ್ ಕಂಪನಿ ಲಿಮಿಟೆಡ್ ಹಣಕಾಸು ಅಧಿಕಾರಿಯಾಗಿ ವರ್ಗ
26-07-23 ರಂದು ವರ್ಗಾವಣೆ ಮಾಡಿ ಆದೇಶ ಮಾಡಿರುವ ಸರ್ಕಾರ.ಮುಕ್ತ ವಿವಿಯಲ್ಲಿ ಕೋಟಿ ಗಟ್ಟಲೆ ಹಣ ಲೂಟಿ ಮಾಡಿರುವ ಕುರಿತು ಆರೋಪ ಹೊತ್ತಿರುವ ಖಾದರ್ ಪಾಷಾ.7-09-2023 ರಂದು ಖಾದರ್ ಪಾಷಾಗೆ ತಿಳುವಳಿಕೆ ಪತ್ರ ವರ್ಗಾವಣೆ ಮಾಡಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿಲ್ಲ ಈ ಕೂಡಲೇ ಸೂಚಿಸಿರುವ ಸ್ಥಳಕ್ಕೆ ಹಣಕಾಸು ಅಧಿಕಾರಿಯಾಗಿ ಹಾಜರಾಗಿ ಸಿಟಿಸಿ ಪತ್ರವನ್ನು ಕಛೇರಿಗೆ ಸಲ್ಲಿಸಿ ಎಂದು ಪತ್ರ ಬರೆದಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕ ಪ್ರಧಾನ ನಿರ್ದೇಶಕರು. ದಿನೇ ದಿನೇ ಬಯಲಾಗುತ್ತಿದೆ ಮುಕ್ತ ವಿವಿಯ ಒಂದೊಂದೇ ಕರ್ಮಕಾಂಡಗಳು