ಚಾಮರಾಜನಗರ : ಅತ್ತೆ,ಮಾವ ಮತ್ತು ಪತಿಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಗಿರುವ ಘಟನೆ ನಡೆದಿದೆ.
ಮನೆಯಲ್ಲಿ ಪ್ರತಿದಿನ ನಡೆಯುತ್ತಿದ್ದ ಕೌಟುಂಬಿಕ ಕಲಹವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮೇಘ(26),ಪುನ್ವಿತಾ(6) ಮತ್ತು ಮನ್ವಿತಾ(3) ಮೃತ ದುರ್ದೈವಿಗಳು.ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಳೆದ 8 ವರ್ಷಗಳ ಹಿಂದೆ ಗ್ರಾಮದ ಧನಂಜಯ ಎಂಬ ವ್ಯಕ್ತಿಯ ಜೊತೆ ವಿವಾಹವಾಗಿತ್ತು. ಆರಂಭದಿಂದಲೂ ಮನೆಯಲ್ಲಿ ಅತ್ತೆ, ಮಾವ, ಪತಿಯ ಕಿರುಕುಳ ಬೇಸತ್ತು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಬಳಿಕ ಅತ್ತೆ ಮಾವ ಮತ್ತು ಪತಿ ಧನಂಜಯ ಪರಾರಿಯಾಗಿದ್ದಾರೆ.
ತೆರಕಣಾಂಬಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ ತಲೆ ಮರೆಸಿಕೊಂಡಿರು ಅತ್ತೆ ಮಾವ ಮತ್ತು ಪತಿಯ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆ