ಮೈಸೂರು : ಗೌರಿ ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ.ವಿವಿಧ ಧರ್ಮಗಳ ಮುಖಂಡರ ಜತೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬನೋತ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆ ನಡೆಸಿದರು.
ಮುಂಬರುವ ಗಣೇಶೋತ್ಸವ ಸಂದರ್ಭದಲ್ಲಿ ತಮ್ಮ ತಮ್ಮ ಬಡಾವಣೆಗಳಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಲು ಮನವಿ ಮಾಡಲಾಯಿತು.
ಈ ವೇಳೆ ಧರ್ಮಗಳ ಮುಖಂಡರಿಗೆ ಕೆಲ ಸೂಚನೆಗಳನ್ನು ಆಯುಕ್ತರು ನೀಡಿದರು.ಇದೇ ಸಂದರ್ಭದಲ್ಲಿ ಗಣೇಶೋತ್ಸವ ಸೌಹಾರ್ದ ರೀತಿಯಲ್ಲಿ ನಡೆಯಯವಂತೆ ಸಹಕಾರ ನೀಡುವುದಾಗಿ ಸಮ್ಮತಿ ನೀಡಿದ ಅಲ್ಪಸಂಖ್ಯಾತ ಮುಖಂಡರು.ಸಭೆಯಲ್ಲಿ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾನ್ಹವಿ, ವಿವಿಧ ಧರ್ಮಗಳ ನಾಯಕರುಗಳು, ಮುಖಂಡರು ಹಾಜರಿದ್ದರು.