ಮೈಸೂರು : ಬಿಜೆಪಿ ಜೆಡಿಎಸ್ ಮೈತ್ರಿ ವಿಚರವಾಗಿ ಅಲರ್ಟ್ ಆಗಿರುವ ಸಂಸದ ಪ್ರತಾಪ್ ಸಿಂಹ ಜೆಡಿಎಸ್ ವರಿಷ್ಟರ ಎಚ್.ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿದ ಫೋಟೋ ವೈರಲ್ ಆಗಿದೆ.
ಜೆಡಿಎಸ್ ವರಿಷ್ಟರ ಭೇಟಿ ಮಾಡಿ ಆಶೀರ್ವಾದ ಪಡೆದ ಸಂಸದ ಪ್ರತಾಪ ಸಿಂಹ.ಕಳೆದ ಭಾನುವಾರ ಆದಿ ಚುಂಚನಗಿರಿ ನೂತನ ಶಾಖಾ ಮಠಕ್ಕೆ ಭೇಟಿ ನೀಡಿದ ಜೆಡಿಎಸ್ ವರಿಷ್ಟ ಎಚ್.ಡಿ ದೇವೇಗೌಡ.
ಈ ವೇಳೆ ಎಚ್.ಡಿ ದೇವೇಗೌಡ ಹಾಗೂ ಜಿ.ಟಿ ದೇವೇಗೌಡರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವ ಪ್ರತಾಪ ಸಿಂಹ.
ಮಂಡಿಯೂರಿ ನಮಸ್ಕರಿಸುತ್ತಿರುವ ಫೋಟೊ ವೈರಲ್ ಆಗಿದ್ದು ,ಒಂದು ಫೋಟೊ ಹಲವು ರಾಜಕೀಯ ಲೆಕ್ಕಾಚಾರಗಳು ಗರಿಗೆದರಿದೆ.ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಭಾಲ್ಯ ಹೊಂದಿರುವ ವಕ್ಕಲಿಗರು.ಈಗಿಲಿಂದಲೇ ಜೆಡಿಎಸ್ ಮತಬ್ಯಾಂಕ್ ಕೈ ಹಾಕಿದ ಸಂಸದ ಪ್ರತಾಪ ಸಿಂಹ.
ಮೈಸೂರು ಭಾಗದ ಜೆಡಿಎಸ್ ನಾಯಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಪ್ರತಾಪ ಸಿಂಹ.ಈಗಾಗಲೇ ಎರೆಡು ಭಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ ಸಿಂಹ.
ಹ್ಯಾಟ್ರಿಕ್ ಗೆಲುವಿಗೆ ಚುನಾವಣಾ ರಣತಂತ್ರ ಹೆಣೆಯುತ್ತಿರುವ ಸಂಸದ ಪ್ರತಾಪ ಸಿಂಹಗೆ ಸದ್ಯ
ದೊಡ್ಡ ಗೌಡರ ಆಶೀರ್ವಾದ ಸಿಕ್ಕಿದ್ದು ಮುಂದಿನ ಲೋಕ ಸಭಾ ಅಖಾಡ ರಣಕಣವಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವಂತಾಗಿದೆ.