ಮೈಸೂರು : ಮಹಿಷ ದಸರಾ ಆಚರಣೆ ಕುರಿತು ಸಂಸದ ಪ್ರತಾಪ್ ಸಿಂಹ ಕೆಂಡಕಾರಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ದಿನ ಸಾವಿರಾರು ಜನ ಬರ್ತಾರೆತಾಯಿ ಆಶೀರ್ವಾದ ಪಡೆಯಲಿಕ್ಕೆ ಜನ ಬರ್ತಾರೆ ನಂಬಿಕಸ್ಥರಿಗೆ ತಾಯಿ ಇರೋದುಅದನ್ನು ಚಾಮುಂಡಿ ಬೆಟ್ಟ ಅಂತಾರೆ
ಮಹಿಷ ಬೆಟ್ಟ ಅನ್ನಲ್ಲ ಎಂದು ವಾಗ್ದಾಳಿ ನಡೆಸಿದರು.
ಮಹಿಷ ದಸರಾ ಮಾಡಲು ನಾವು ಬಿಡಲ್ಲ
ಮಹಿಷ ದಸರಾ ದಿನ ನಾನು ಅಲ್ಲೇ ಇರ್ತೀನಿ ಸಂಘರ್ಷ ಆದ್ರೂ ಪರ್ವಾಗಿಲ್ಲಮಹಿಷ ದಸರಾ ಮಾಡಲು ನಾನು ಬಿಡಲ್ಲ ಮಹಿಷ ದಸರಾ ಮಾಡುವವರು ಮನೆಯಲ್ಲೇ ಫೋಟೋ ಇಟ್ಟು ಪೂಜೆ ಮಾಡಲಿಮಹಿಷನಂತೆ ಮಗನನ್ನು ಕೊಡು ಎಂದು ಬೇಡಿ ಕೊಳ್ಳಲಿಮಹಿಷ ದಸರಾ ಆಚರಣೆಗೆ ಮುಂದಾದ ಪ್ರಗತಿಪರರಿಗೆ ಸಿಂಹ ಟಾಂಗ್ ನೀಡಿದರು.
ಬಿಜೆಪಿ ಸರ್ಕಾರ ಇದ್ದಾಗ ಇಂತಹ ಅನಾಚರವನ್ನು ನಿಲ್ಲಿಸಿದ್ದೇವೆಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮಹಿಷ ದಸರಾಗೆ ಅನುಮತಿ ಕೊಟ್ಟಿದ್ದರು
ನಾನು ಈಗ ಜಿಲ್ಲಾಡಳಿತ ಪೊಲೀಸರಿಗೆ ಹೇಳುತ್ತೇನೆ
ಮುಖ್ಯಮಂತ್ರಿಗಳಿಗು ಮಹಿಷ ದಸರಾ ಆಚರಣೆ ಅವಕಾಶ ಕೊಡಬೇಡಿ ಎಂದು ಹೇಳುತ್ತೇನೆ ಯಾವುದೇ ಕಾರಣಕ್ಕೂ ಮಹಿಷ ದಸರಾ ಆಚರಣೆಗೆ ಬಿಡಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು