ಚಾಮರಾಜನಗರ : ಕೇರಳದಲ್ಲಿ ಹೆಚ್ವುತ್ತಿರುವ ಹಂದಿ ಜ್ವರ, ಆಫ್ರಿಕನ್ ಸ್ವೈನ್ ಪ್ರಕರಣ ಕರ್ನಾಟಕ-ಕೇರಳಾ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಗುಂಡ್ಲುಪೇಟೆ ಮತ್ತು ಮೈಸೂರಿನ ಎಚ್.ಡಿ ಕೋಟೆಯ ಬಾವಲಿ ಚೆಕ್ ಪೋಸ್ಟ್ ಬಳಿ ಕಟ್ಟೆಚ್ಚರ.
ಕೇರಳಾದಿಂದ ಬರುವ ವಾಹನಗಳ ಮೇಲೆ ತೀವ್ರ ನಿಗಾ.
ವಾಹನಗಳಿಗೆ ಸ್ಯಾನಿಟೈಸ್.ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಗುಂಡ್ಲುಪೇಟೆಯ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ತೀವ್ರ ನಿಗಾ.ಕೇರಳ ರಾಜ್ಯದಿಂದ ಪ್ರತಿ ವಾಹನ ಗಳಿಗೂ ಸ್ಯಾನಿಟೈಸ್.ಕೇರಳದಲ್ಲಿ ಆಫ್ರಿಕನ್ ಸ್ಟೈನ್ ಫೀವರ್ ಉಲ್ಬಣ.ಇದು ಕೊರೊನಾ ವೈರಸ್‌ನಂತೆ ಬೇಗ ಹರಡುವ ವೈರಲ್ ಫೀವರ್.ಸದ್ಯ ಕಾಡು ಹಂದಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಜ್ವರದಿಂದ ಹೆಚ್ಚಾಗಿ ಹಂದಿಗಳು ಸಾವನ್ನಪ್ಪುತ್ತಿದ್ದು, ಹಂದಿಗಳಿಂದ ಬೇರೆ ಕಾಡು ಪ್ರಾಣಿಗಳಿಗೂ ಹರಡುವ ಭೀತಿ ಎದುರಾಗಿದೆ.