ಮೈಸೂರು : 40 ಜನ ಕೈ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಬಿ ಎಲ್ ಸಂತೋಷ್ ಹೇಳಿಕೆ ವಿಚಾರಕ್ಕೆ ನಲವತ್ತಲ್ಲ ಕೇವಲ ನಾಲ್ಕು ಶಾಸಕರನ್ನು ಕರೆದುಕೊಂಡು ಹೋಗಲಿ ಎಂದು ಬಿ ಎಲ್ ಸಂತೋಷ್ಗೆ ಸಚಿವ ಶಿವರಾಜ್ ತಂಗಡಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಮುಳುಗುವ ಹಡಗು ಅಲ್ಲಿಗೆ ಯಾರು ಹತ್ತುತ್ತಾರೆ.?
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.
ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎನ್ನುವುದು ದೊಡ್ಡ ಸುಳ್ಳು. ಬಿಜೆಪಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ದವೂ ವಾಗ್ದಾಳಿ ನಡೆಸಿದರು. ಚುನಾವಣಾ ವೇಳೆ ಗಲ್ಲಿ ಗಲ್ಲಿ ಸುತ್ತಿದರು ಬಂದಿದ್ದು ಕೇವಲ 66 ಸ್ಥಾನ.
ಚುನಾವಣಾ ಚಾಣಕ್ಯನ ಆಟ ಏನು ನಡೆಯಲಿಲ್ಲ.
ಈಗ ನಮ್ಮ ಪಕ್ಷಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ.
ನಮ್ಮಿಂದ ಯಾರು ಹೊರಗೆ ಹೋಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು