ಮೈಸೂರು : ರಾಜೇಂದ್ರ ಶ್ರೀಗಳ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಶ್ರೀಗಳ ಕುರಿತು ಅನೇಕ ವಿಷಯಗಳನ್ನು ಮೆಲಕು ಹಾಕಿದರು.
ನಾನು ಅನೇಕ ಬಾರಿ ರಾಜೇಂದ್ರ ಶ್ರೀಗಳಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ.ಈ ಕಾರ್ಯಕ್ರಮಕ್ಕೆ ಬರಲೇಬೇಕೆಂದು ದೇಶಿಕೇಂದ್ರ ಶ್ರೀಗಳು ಹೇಳಿದ್ರು.ಮತ್ತೊಮ್ಮೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋ ಅವಕಾಶ ಸಿಕ್ಕಿದೆ.
ಡಾ.ರಾಜೇಂದ್ರ ಶ್ರೀಗಳ ದೂರದೃಷ್ಟಿಯಿಂದ ಈ ಅಭಿವೃದ್ಧಿ ಆಗಿದೆ.ಜೆಎಸ್‌ಎಸ್ ವಿದ್ಯಾಪೀಠ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವೇ ರಾಜೇಂದ್ರ ಶ್ರೀಗಳು.
ಸಾವಿರಾರು ಮಕ್ಕಳಿಗೆ ಶಿಕ್ಷಣ ಪಡೆಯೋದಕ್ಕೆ ಕಾರಣವಾಗಿದೆ ಎಂದರು.
ಅನ್ನದಾಸೋ, ವಸತಿ ನಿಲಯ, ವಿದ್ಯಾದಾನ ಮಾಡಿದ್ದಾರೆ.
ನಮ್ಮಲ್ಲಿ ಚುತುರವರ್ಣ ಪದ್ಧತಿ ಇತ್ತು.ಇದರಲ್ಲಿ ಶೂದ್ರ ಜನಾಂಗ ಅಕ್ಷರದ ಸಮಸ್ಯೆ ಎದುರಿಸುತ್ತಿದ್ದರು.
ಸಾಮಾಜಿಕ ಅಸಮಾನತೆ’ ಆರ್ಥಿಕ ಅಸಮಾನತೆ ಎದುರಿಸುತ್ತಿತ್ತು.ಈಗಲು ಆ ಸಮಸ್ಯೆ ಇದ್ದರು’ ಅದು ಚಿಕ್ಕ ಪ್ರಮಾಣದಲ್ಲಿದೆ.ಯಾವುದೇ ಸಮಾಜ ಶಿಕ್ಷಣ ಪಡೆಯದಿದ್ದರೆ ಸ್ವಾಭಿಮಾನದಿಂದ ಬದುಕೋದು ಕಷ್ಟ.
ಈ ಕಾರಣದಿಂದಲೇ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣದಿಂದ ವಂಚಿತರಾದವರನ್ನ.ಮನ್ನುಷ್ಯರನ್ನಾಗಿ ಮಾಡಿದ ಕೀರ್ತಿ ಸಲ್ಲುತ್ತೆ.ಬಾಬಾ ಸಾಹೇಬ್ ಅಂಬೇಡ್ಕರರ ಆಶಯ ಸಕಾರ ಆಗಬೇಕಾದರೆ ಸರ್ವರಿಗು’ ಎಲ್ಲಾ ವರ್ಗದ ಜನರಿಗು ಶಿಕ್ಷಣ ಲಭಿಸಬೇಕು.ಈ ಕೆಲಸ ರಾಜೇಂದ್ರ ಶ್ರೀಗಳು ಮಾಡಿದರು ಅದರಿಂದಲೇ ರಾಜೇಂದ್ರ ಶ್ರೀಗಳನ್ನ ನೆನೆಯಬೇಕು ಎಂದರು.
ಇವತ್ತು ಶೇ.78 ರಷ್ಟು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ.
ಇನ್ನುಳಿದವರು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ನಾವು ಸಂವಿಧಾನದಲ್ಲಿ ಹೇಳಿದ್ದೇವೆ’ ಉಚಿತ ಶಿಕ್ಷಣ ಅಂತ.
ಶಿಕ್ಷಣ ಪಡೆಯೋದು ಎಲ್ಲರ ಹಕ್ಕು ಅಂತ ಹೇಳಿದ್ದೇವೆ.
ಗುಣಮಟ್ಟದ ಶಿಕ್ಷಣ ಪಡೆದರೆ ವೈಜ್ಞಾನಿಕ, ವೈಚಾರಿಕ ವಿಚಾರ ಗೊತ್ತಾಗುತ್ತೆ.ವ್ಯವಸ್ಥೆಯಲ್ಲಿ ರಾಜಿಕೊಳ್ಳ ಮಾಡಿಕೊಳ್ಳಬಾರದು.ವಿಶ್ವಮಾನವ ದೃಷ್ಠಿಕೋನ ಎಲ್ಲರಲ್ಲು ಬೆಳೆದರೆ.ನಾವು ಮನ್ನುಷ್ಯರು ಅಂತ ಹೇಳಿಕೊಳ್ಳಲು ಸಾಧ್ಯ.ಅನೇಕರು ವಿದ್ಯಾವಂತರಾದರು ಸಹ ವ್ಯವಸ್ಥೆ ಜೊತೆ ರಾಜಿ ಮಾಡಿಕೊಂಡು ಬದುಕುತ್ತಿದ್ದಾರೆ.ನಾವು ಯಾವುದು ಮಾನವೀಯ ವ್ಯವಸ್ಥೆ.?ಯಾವುದು ಅಮಾನವೀಯ ವ್ಯವಸ್ಥೆ ಎಂದು ತಿಳಿಯಬೇಕು ಎಂದು ಹೇಳಿದರು.
ಅದರಲ್ಲಿ ಮಾನವೀಯ ವ್ಯವಸ್ಥೆಯನ್ನ ಬೆಳೆಸಿಕೊಳ್ಳಬೇಕು.
ಶಿಕ್ಷಣ ಹಿಂದಿಗಿಂತ ಈಗ ಅವಶ್ಯಕವಾಗಿದೆ.
ಸುತ್ತೂರು ಮಠ ಧರ್ಮ ಪ್ರಚಾರದ ಜೊತೆ ವಿದ್ಯಾ ಪ್ರಚಾರವನ್ನು ಮಾಡುತ್ತಿದೆ.ಆರೋಗ್ಯ ಕ್ಷೇತ್ರದಲ್ಲು ಕೂಡ ಅಪಾರವಾದ ಕೆಲಸ ಮಾಡಿದೆ.
ನಾವು ಎಷ್ಟು ವರ್ಷ ಬದುಕಿದ್ದೀವಿ ಅಂತ ಹೇಳೋದಲ್ಲ.
ನಾವು ಬದುಕು ಸಾರ್ಥಕ ಮಾಡಿಕೊಂಡಿದ್ದೇವೆ ಅಂತ ತಿಳಿಬೇಕು.ಇದನ್ನ ನಾವು ಆತ್ಮವಲೋಕನ ಮಾಡಿಕೊಂಡಾಗ ಮಾತ್ರ ಸಾರ್ಥಕತೆ.ಇಲ್ಲದಿದ್ರೆ ಇದು ಸಾರ್ಥಕ ಬದುಕಲ್ಲ.ರಾಜೇಂದ್ರ ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗೃತಗೊಳಿಸಿದ್ದಾರೆ.ಒಂದು ಲಕ್ಷಕ್ಕು ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ ಎಂದರು.
ಇಷ್ಟು ಹೆಮ್ಮರವಾಗಿ ಮಾಡಿದ ಶ್ರೀಗಳಿಗೆ ಎಷ್ಟು ಧನ್ಯವಾದ ಹೇಳಿದರು ಸಾಲದು.
ಬಸವಣ್ಣ ಅವರು ಜಾತಿ’ ವರ್ಣ ವ್ಯವಸ್ಥೆ ವಿರುದ್ಧ ಹೋರಾಡಿದವರು.ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನ ಹೇಳಿದ ಸಿದ್ದರಾಮಯ್ಯ.
ಇವ ನಮ್ಮವ ಇವ ನಮ್ಮವ ಎಂದು ನಮ್ಮ ವ್ಯವಸ್ಥೆಯಲ್ಲಿ ಯಾರು ಹೇಳಿಲ್ಲ.ಇವನಾರು, ಇವನಾರು ಎಂದು ಕೇಳುತ್ತಾರೆ.ವಿದ್ಯೆಯಿಂದ ಸಹಿಷ್ಣುತೆ, ಸಹಬಾಳ್ವೆ ಬರುತ್ತೆ ಎನ್ನೋ ಮಾತು ಎಷ್ಟೋ ಬಾರಿ ಸುಳ್ಳಾಗಿದೆ ಅನ್ನೋದು ನೋವು ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು